Close

Bhaavodvega

ಆಕಾಶಮುಖಿ

ನನ್ನೊಲವು ನಲಿವಾಗಿ ಎಳೆ ಎಳೆಯಾಗಿ ಹರಡಿಕೊಂಡಂತೆ ನಾ ತೇಲಿ ಹೋಗುತ್ತೇನೆ! ಇರುಳಾಗುತ್ತದೆ ಮನ; ಕಡಲಾಗುತ್ತದೆ ಹಾಸಿಗೆ; ಈಜುತ್ತೇನೆ ನಾನು ದಡ ತಲುಪಲಾಗುವುದೇ ಇಲ್ಲ| ನಿಧಾನ ಮುಳುಗುತ್ತೇನೆ ಕನಸಿನಲೆಗಳ ಹೊಡೆತಕ್ಕೆ ಹರಿವಿನ ವೇಗಾಮೋದಕ್ಕೆ ಸಿಲುಕಿ; ಕೊಸರುತ್ತೇನೆ | ಅತ್ತಿತ್ತ ಹೊರಳುರುಳಿ ಮತ್ತೊಮ್ಮೆ ಇರುಳ ಕಡಲ ಬಿಡಲೊಳಗೆ ಬಂಧಿಯಾಗುತ್ತೇನೆ | ಮುಖ ಹುದುಗಿಸಲೂ ಮುಖಾಮುಖಿಯಾಗದ ಕಡಲಡಿಯ ಬಯಲಿಗೆ ನಿಧಾನ ಆಕಾಶಮುಖಿಯಾಗುತ್ತೇನೆ | Please follow and like us:

Read More

ಊರಿ ನಡೆಯಲಿಲ್ಲ ಹೆಜ್ಜೆ

ನಾ ನಡೆದಿದ್ದೇನೆ ಭ್ರಾಂತನಾಗಿ – ಊಳಿಡುವ ಮನದ ಜಾಡು ಹಿಡಿದು ನಡೆದಿದ್ದೇನೆ ಈ ರಾತ್ರಿ ಕತ್ತಲೆಯ ಸಿರಿ ನೀರವತೆಯಲಿ ನೆನಪ ಮಗ್ಗಲು ಮುಳ್ಳಿನ ಆವುಗೆ ಧರಿಸಿ | ನೀನೆಲ್ಲಿರುವೆ, ಎಲ್ಲಿರುವೆ ನೀನು? ತಿಳಿಯಲು ನಾ ನಡೆದಿದ್ದೇನೆ….. ಇಬ್ಬರೂ ಸಂಧಿಸಿದ ಆ ಬಿಂದುವಿನಿಂದ ಹೊರಟು ನಿಶ್ಚಲವಾಗಿ ಬಿದ್ದಿರುವ ರಸ್ತೆ ಮೈಮೇಲೆ ಅಗಣಿತ ಪಾದಗಳ ಗುರುತು || ನಾ ಹುಡುಕುವುದು ವ್ಯರ್ಥ, ಒಂದೂ ನಿನ್ನ ಪಾದದ ಆಕಾರಕ್ಕೆ ಹೋಲುತ್ತಿಲ್ಲ ಅನಂತ ಹೆಜ್ಜೆ ಗುರುತುಗಳು […]

Read More

ಅಗಲಿಕೆ

ನನ್ನ ಮಾತಲ್ಲಿ ಏನೆಲ್ಲಾ ಆವೇಗ, ಆಕ್ರೋಶ ಮನದಲ್ಲಿ ಹಿಡಿದಿಡಲಾಗದೆ ಕಕ್ಕಿದ ಭಾವ ಅಂತರಂಗದ ಬಯಕೆ ಆತನ ಆಗಮನದಿಂದ ಬೀದಿಗೆ ಬಿದ್ದಂತೆ ನಿಸ್ತೇಜ ಆತನೀಗ ಬರಿಯ ಪ್ರಿಯ ಗೆಳೆಯ ಆಕೆಯೂ ಗೆಳೆತಿ – ನಮ್ಮ ಗೆಳೆತನದ ನಿಜತನ ಅವಳೇನು ಬಲ್ಲಳು ಪಾಪ ನನ್ನಂತೆ ಅವನ ಮಾತಿನ ಮೋಡಿಗೆ ಬಲಿಯಾದವಳು ನಮ್ಮದೆಂದು ಕೊಂಡದ್ದು ನಮ್ಮದಲ್ಲವೆಂದು ಆತನ ನಿರ್ಗಮನದಲ್ಲಿಯೇ – ಅರಿವಾದದ್ದು ಈಗ ಕಾಯುವ ಕಾಯಕವಿಲ್ಲ – ನೆನಪೆಂಬ ವಿಷ ನುಂಗಲೂ ಆಗದೆ – […]

Read More

ಕೂಸು

ಹೆತ್ತಬ್ಬೆಗೆ ಬೇಡವಾದ ಜೀವ ಅಪ್ಪಯ್ಯನಿಗೂ ಆಪ್ಯಾಯವಾಗದೆ ಬಡವಾಯಿತು ಕೂಸು ಅರಳುವ ಮುನ್ನವೇ ಕಿತ್ತು ಮೊಗ್ಗನ್ನು ಖಾಲಿ ಗಿಡ ನೋಡಿ ಸಂತಸ ಹೊಂದುವ ಮಂದಿಗೇನು ಗೊತ್ತು ಕೂಸಿನಮನದ ನೋವು? ನೋವಿನ ಹಾದಿಯಲಿ ನಲಿವಿನ ಸುಳಿವರಸುತ್ತಾ ಕಾಯುತ್ತಿದೆ ಪ್ರೀತಿಗೆ ಹಂಬಲಿಸುತ್ತಾ Please follow and like us:

Read More

ಗೆಳೆಯಾ ಹೋಗದಿರು

ಗೆಳೆಯಾ ಹೋಗದಿರು ದೂರ ನನ್ನೆದೆಯು ಆಗುವುದು ಭಾರ ಸಾವಿರ ಸಂಭ್ರಮದ ಬೀಜ ಬಿತ್ತಿ ಗಿಡವಾಗುವ ಮುನ್ನವೇ ನೀ ಹೊರಟುಹೋಗುವೆಯಾ? ಚಂಚಲ ಮನಸೇ ದೂರ ಸರಿ ನನ್ನಿಂದ ದೂರ ನಿಲ್ಲು ನನಗೇನೂ ಹೇಳಬೇಡ ಬೇಡ ಬರಬೇಡ ನನಗಾತ ಬೇಕೇ ಬೇಕು ಗೆಳೆಯಾ ಹೋಗುವೆಯಾ ದೂರ? ಗೆಳೆಯಾ ಹೋಗದಿರು ದೂರ ಕಷ್ಟಗಳ ಸಮುಚ್ಛಯಗಳೊಂದಿಗೆ ನನ್ನೊಡನೆ ಹಂಚಿಕೊ ಸಂತೋಷ ಹಂಚಿಕೊಂಡಂತೆ ಹೋಗದಿರು ನೀ ನಾ ನಿನ್ನ ದುಃಖಗಳಿಗೆ ಹೆಗಲು ಕೊಡುವೆ. ಗೆಳೆಯಾ ಹೋಗದಿರು ದೂರ […]

Read More

ಆಸ್ತಿ

ಮುಖದ ಪೇಲವತೆ ಗುಳಿಬಿದ್ದ ಕೆನ್ನೆ – ಮೊನ್ನೆ ನೋಡಿದೆ ನನ್ನ ಮುಖ ಕನ್ನಡಿಯಲ್ಲಿ – ನನ್ನ ಆಸ್ತಿಗಳವು ನನಗೆ ನಾನೇ ಅಸಹ್ಯವೆನಿಸಿ ಊಟವೂ ಸಹ್ಯವಾಗದೆ ಮನ ಮಂಕಾಗಿ ಬುದ್ಧಿ ಮಂದವಾಗುತಿದೆ. ನನ್ನದೇ ಬಿಂಬ ಕನ್ನಡಿಯಲ್ಲಿ ಬಿಂಬಕ್ಕೆ ನಾನೇಆಧಾರಸ್ತಂಭ ಹುಚ್ಚು ಮನಸಿಗೆ ಕಿಚ್ಚು ಹಚ್ಚಿ ಕುಳಿತಲ್ಲೇ ಕುಳಿತೆ ಹಲವರು ಬಂದರು ತಿಂದುಂಡು ಹೊರಟುಹೋದರು ಯಾರ ಕರುಣೆಯು ಬೇಕಿರಲಿಲ್ಲ ನನಗೆ ನನ್ನತನವನ್ನೇ ಕಳಕೊಂಡು ಖಾಸಗಿ ಬದುಕಿಲ್ಲದೆ ಯಾರೋ ಆಡಿಸಿದಂತೆ ಕುಣಿದು ದಣಿದಿದ್ದೇನೆ ಮನ […]

Read More

ಕಂಗಳ ಕೊಳದ ಚೆಲುವೆ

ಕಂಗಳ ಕೊಳದಲ್ಲಿ ಬೆಳದಿಂಗಳ ಚೆಲುವೆ ಚಿತ್ತಾರವ ಬಿಡಿಸಿ ಮರೆಯಾದಳು ಒಲವೆ   ಮೀನಿನ ಹೆಜ್ಜೆ ಹಿಡಿವುದು ಹೇಗೆ ಕಾಣದ ಅವಳ ಒಲಿಸಲಿ ಹೇಗೆ ಕಂಗಳ ಕೊಳದಲ್ಲಿ ನೀರಿಂಗಿ ಬರಡಾಗಿದೆ ಕಣ್ಣು   ಅತ್ತು ಅತ್ತು ಕರೆದರೂ ಅವಳ ಸುಳಿವಿಲ್ಲ ಅಮಾವಾಸ್ಯೆಯ ಚಂದಿರನಂತೆಯೋ ಮೋಡಗಳೆಡೆಯಲ್ಲಿ ಅವಿತ ರವಿಯಂತೆಯೋ ಅಡಗಿ ಕುಳಿತಳು ಅವಳು ಕರೆಗೆ ಓಗೊಡದೆ   ಬರಡಾದ ಕಣ್ಣು – ಬಸವಳಿದ ಜೀವ ಹರಯ ಮುಪ್ಪಾದರೂ ಕಾಯುತ್ತಲಿದೆ ಶಬರಿ ರಾಮನ ಕಾದ ಹಾಗೆ ಬರುವಳೆಂದೋ ಬರದೇ ಕಾಡುವಳೆಂದೋ!   ದೇಹ ನಶ್ವರವಾಗಿ ಮಣ್ಣಾದರೂ ಮನಸು ಮಾನಿನಿಯಾಗಿ ಅಲೆಯುತಿಹುದು ಕಂಗಳ ಕೊಳದ ಅವಳ ಹುಡುಕುತಿಹುದು – ಕಾಯುತಿಹುದು Please follow and like us:

Read More

Enjoy this blog? Please spread the word :)