Close

Aneesh

ಕೂಸು

ಹೆತ್ತಬ್ಬೆಗೆ ಬೇಡವಾದ ಜೀವ ಅಪ್ಪಯ್ಯನಿಗೂ ಆಪ್ಯಾಯವಾಗದೆ ಬಡವಾಯಿತು ಕೂಸು ಅರಳುವ ಮುನ್ನವೇ ಕಿತ್ತು ಮೊಗ್ಗನ್ನು ಖಾಲಿ ಗಿಡ ನೋಡಿ ಸಂತಸ ಹೊಂದುವ ಮಂದಿಗೇನು ಗೊತ್ತು ಕೂಸಿನಮನದ ನೋವು? ನೋವಿನ ಹಾದಿಯಲಿ ನಲಿವಿನ ಸುಳಿವರಸುತ್ತಾ ಕಾಯುತ್ತಿದೆ ಪ್ರೀತಿಗೆ ಹಂಬಲಿಸುತ್ತಾ Please follow and like us:

Read More

ಧಾವಂತ

ಮುಂಜಾವಿನ ಮಂಜು ಎಲೆಗಳನು ತೋಯಿಸಿ ಬಿಸಿಲಿಗೆ ಬಸವಳಿದು ಕರಗಿತು ಹಸಿದು. ಸೂರ್ಯನ ಬರುವಿಕೆಯ ಅಂದದ ನೋಟ ಮನ ತಣಿಸಿತು ಕತ್ತಲ ಬಿರಿದು. ಚಂದ್ರ ಓಡಿದನೆಲ್ಲಿಗೆ ಸೂರ್ಯ ಮೂಡಿದ ಬಾನಲಿ ಅವನೂ ಮಾಡುತ್ತಿದ್ದಾನೆ ಪ್ರಯಾಣ ನಿಧಾನ. ನಿಧಾನಿಸಿ, ಧಾವಿಸಿ ಕೊನೆಗೆ ಧಾವಂತದಲಿ ಸೇರುವನು ಕಡಲ ಬಿಡಲು. ಚಂದಿರನು ಮರಳುವನು ತಂಪು ಆಗಸಕೆ ನೀಡುವನು ಬೆಳದಿಂಗಳು ಈ ಜಗಕೆ. Please follow and like us:

Read More

ನಾಶ

ಬಿರುಗಾಳಿಗೆ ಎದುರಿರುವ ದೀಪವುಂಟೇ ಸಮುದ್ರದಲೆಗಳನ್ನು ಎದುರಿಸುವ ಗೋಡೆಯುಂಟೇ? ಆರಿ ಹೋಯಿತು ದೀಪ ಗಾಳಿಯ ಕಿರು ನಗೆಗೆ ಗೋಡೆ ಉರುಳಿತು ಧರೆಗೆ ಅಲೆಗಳ ಚುಂಬನಕೆ ತೇಲು ಹೋದಳು ಅವಳು ಅಲೆಗಳನೇರಿ… ಆ… ಉರುಳಿದ ಗೋಡೆಯ ಅವಶೇಷಗಳ ಮೇಲೆ. ಕೈಯಲ್ಲಿ ಆರಿದ ದೀಪ ಮೊಗದಲ್ಲಿ ಕೋಪದ ತಾಪ ಯಾರೂ ಇಲ್ಲದ ಮುದ್ದು ಪಾಪ ಹೋದದ್ದಾದರೂ ಎಲ್ಲಿಗೆ? ಅಲೆಗಳು ಸರಿಯುತ್ತಿವೆ ಕಲ್ಲುಗಳು ನೆಲದಲಿ ಹಾಸಿವೆ ಅಚ್ಚುಕಟ್ಟಾಗಿ-ಕಾದಿವೆ ಅವಳ ಪಾದ ಸ್ಪರ್ಶಕೆಂದು. ಗೊತ್ತಿಲ್ಲ ಮರಳಿ ಬರುವಳೋ… […]

Read More

ಮಾತು

ಚಂದಿರನ ಅಂಗಳದಲ್ಲಿ ನಾವಿಬ್ಬರು ಜೋಕಾಲಿಯಾಡುತ್ತಿರುವ ಕನಸು-ಇಂದು ನಿನ್ನೆಯದಲ್ಲ… ಒಂದೇ ಕಂಪನಿಯ ಎರಡು ಛೇಂಬರಿನಲ್ಲಿರುವ ನಮಗೆ ವಾರಕ್ಕೊಮ್ಮೆ ಮಾತನಾಡಲೂ ಸಮಯವಿಲ್ಲ! ನಿತ್ಯ ನಿರಂತರ ಉದ್ಯೋಗ ನಿದ್ದೆ-ಆಹಾರ, ಅವಾಗ-ಇವಾಗ ಒಂದು ಎಸ್ಸೆಮ್ಮೆಸ್ಸು ಒಂದು ಮಿಸ್ ಕಾಲು ಇಷ್ಟೇ ನಮ್ಮೊಳಗಿನ ಸಂಭ್ರಮ. ವರುಷಕ್ಕೊಂದೇ ದೀವಳಿಗೆ ಊರಿಗೆ ಹೊರಟೆವು ಮೆರವಣಿಗೆ ಬಸೇರಿ ಇಳಿದು, ರೈಲೀರಿ-ಬೋಗಿಯೊಳಗೆ ಯೋಗಿಯಂತೆ ಕುಳಿತು. ನನ್ನ ಕೈಲೊಂದು ಕಂಪ್ಯೂಟರ್ ನನ್ನ ಕೈಲೊಂದು… ಎದುರೆದುರಿದ್ದರೂ ಅಂತರ್ಜಾಲದಲ್ಲೇ ಚಾಟಿಂಗ್ ಅಭ್ಯಾಸ ಬಲ. ಅಬ್ಬ ಹಳ್ಳಿಯಲಿ ನೆಟ್‍ವರ್ಕ್ […]

Read More

ನಿಜದ ನೆರಳು ಆರುವ ಮುನ್ನ

ಕಂಬನಿಯಲ್ಲಿ ನಿಜದ ನೆರಳು ಬತ್ತಿ ಹೋಗುವ ಮುನ್ನ ಉರಿಸಿಬಿಡು ಮಿಥ್ಯವನು ಹೊಗೆಯಾಗಲಿ… ಇರದಿರಲಿ ಮಿಥ್ಯದ ಜಾಡು ಭಯದಲ್ಲಿ ನಿಜದ ನೆರಳು ಕರಗಿ ಹೋಗುವ ಮುನ್ನ ತೊದಲಿಬಿಡು ಸತ್ಯವನು ಸುಳ್ಳಿನ ಸುಳುಹುಗಳ ತೊಳೆದು-ಕಳೆದು. ಪ್ರಕೃತಿಯಲ್ಲಿ ನಿಜದ ನೆರಳು ಮಾಯವಾಗುವ ಮುನ್ನ ಊರಿಬಿಡು ನಿಜದ ಬೇರುಗಳ ಬಿತ್ತಿ ಸತ್ಯ ಬೀಜಗಳ ಸುಳ್ಳಿನ ಕಳೆಗಳ ಕಿತ್ತೆಸೆದು. ತನ್ನಿರವೆಂಬುದು ಇಲ್ಲದೆಯೂ ನಿತ್ಯ ನಿರಂತರ ಬೆಳೆವ ಮಿಥ್ಯ ಉರಿದೇ ತೀರುವುದು ನಿಜದ ಧಗ ಧಗ ಲಯ ಬದ್ಧ […]

Read More

ನಡಿಗೆ

ಚಪ್ಪರದಂತಿದ್ದ ಮೇ ಪ್ಲವರ್ ಗಳು ನಡೆದಾಗ ತಲೆಯ ಮೇಲೆ ಬಿಸಿಲು ಬೀಳುವುದನ್ನು ತಪ್ಪಿಸಿದವೋ?! ಬಿಸಿಲಿನ ಶಾಖ ತಟ್ಟದೇ ಇರಲಿಲ್ಲ ನಡೆದ ದಾರಿಯ ನಾನು ಸರಿಯಾಗಿ ನೋಡಲಿಲ್ಲ ಕೊನೆಗೆ ನನ್ನ ಪಾದದ ಹೆಜ್ಜೆ ಗುರುತುಗಳು ಅಲ್ಲಿ ಬಿದ್ದಿದ್ದವೋ?! ಚಪ್ಪಲಿಯಂತೂ ಸವೆದಿದೆ ಸಾರ್ಥಕ್ಯವಿಲ್ಲದ ಯಾತ್ರೆಯಂತೆ ನಡೆದೂ ನಡೆದೂ ಮುಂದೆ ಮುಂದೆ……. ದಾರಿಯೇ ಮುಗಿದು ಹೋದವೋ?! ಸಮಯವಂತೂ ಕಳೆದಿದೆ ಮೇ ಫ್ಲವರುಗಳ ಸುಳಿವಿಲ್ಲ ಸೂರ್ಯ ಇಳಿದು ಸಾಗರದ ಒಡಲು ಸೇರುವ ಅವಸರದಲ್ಲಿದ್ದಾನೋ?! ಬಾನಂತೂ ಕೆಂಪಾಗಿದೆ […]

Read More

Enjoy this blog? Please spread the word :)