Close

Aneesh P V

ಗುರುಗಳಿಗೆ

ನಿಮ್ಮ ಆಶಯ ನನ್ನ ಗುರಿ ನಿಮ್ಮ ಮಾತುಗಳು ನನ್ನ ದಾರಿ ಕಲಿಯಬೇಕಿದೆ ನಿಮ್ಮಿಂದ ಹಲವು ನಾನಿನ್ನೂ ಕೂಸುಮರಿ. ನಿಮ್ಮ ಗಾಂಭೀರ್ಯತೆ ಆ ಸರಳತೆ, ಸ್ನೇಹಭಾವ ನನ್ನ ಕಣ್ಣ ಮುಂದೆ ತೇಲಿ ಹನಿಗೂಡುತ್ತಿವೆ ಕಣ್ಣುಗಳು. ನೀವು ಕಲಿಸಿದ ವಿದ್ಯೆಯಿದೆ ಹೃದಯ ಶ್ರೀಮಂತಿಕೆಯಿದೆ ನಾನಿನ್ನೂ ನಿಮ್ಮ ಬಳಿ ಕಲಿಯುವುದಿದೆ ಬಹಳ. ಪಾದಗಳ ಕೆಳಗೆ ಸರಿಯುವ ದಾರಿಯ ಮೇಲೆ ಕಲ್ಲು-ಮುಳ್ಳುಗಳಿವೆ ತುಳಿದು ಪಾದ ಬೆಳೆಸಿದ್ದೇವೆ-ನೀವು ಕಾಣಸಿಗದ ಘೋರ ನೋವಿನಲ್ಲೂ. ಧನ್ಯವಾದಗಳು ಗುರುಗಳೇ ನಿಮಗೆ ಪ್ರಣಾಮಗಳು […]

Read More

ಗೆಳೆಯಾ ಹೋಗದಿರು

ಗೆಳೆಯಾ ಹೋಗದಿರು ದೂರ ನನ್ನೆದೆಯು ಆಗುವುದು ಭಾರ ಸಾವಿರ ಸಂಭ್ರಮದ ಬೀಜ ಬಿತ್ತಿ ಗಿಡವಾಗುವ ಮುನ್ನವೇ ನೀ ಹೊರಟುಹೋಗುವೆಯಾ? ಚಂಚಲ ಮನಸೇ ದೂರ ಸರಿ ನನ್ನಿಂದ ದೂರ ನಿಲ್ಲು ನನಗೇನೂ ಹೇಳಬೇಡ ಬೇಡ ಬರಬೇಡ ನನಗಾತ ಬೇಕೇ ಬೇಕು ಗೆಳೆಯಾ ಹೋಗುವೆಯಾ ದೂರ? ಗೆಳೆಯಾ ಹೋಗದಿರು ದೂರ ಕಷ್ಟಗಳ ಸಮುಚ್ಛಯಗಳೊಂದಿಗೆ ನನ್ನೊಡನೆ ಹಂಚಿಕೊ ಸಂತೋಷ ಹಂಚಿಕೊಂಡಂತೆ ಹೋಗದಿರು ನೀ ನಾ ನಿನ್ನ ದುಃಖಗಳಿಗೆ ಹೆಗಲು ಕೊಡುವೆ. ಗೆಳೆಯಾ ಹೋಗದಿರು ದೂರ […]

Read More

ನಿನ್ನೆ, ಇಂದು ಮತ್ತು ನಾಳೆ

ನಿನ್ನೆಯ ನೆನಪು – ಕನಸುಗಳು ಇಂದು ನಿಜವಾಗಿ ಹೊಸ ಭರವಸೆಯ ಬೆಳಕು ನಾಳೆಯ ಪರಿಪೂರ್ಣ ಅರಿವು ಇಲ್ಲ ನಾಳೆಯೇ ಇಲ್ಲವೇನೋ ಎಂಬ ಅಳುಕು ನಿನ್ನೆಯ ಸುಳ್ಳು ಇಂದು ನಿಜವಾದೊಡೆ ಇಂದಿನ ಕನಸು ನಾಳೆ ನನಸಾಗದೇ? ಇಲ್ಲ ನಾಳೆಯೇ ಇಲ್ಲ ಹೂವ ಹಾಸಿಗೆಯೂ ಮುಳ್ಳಾಗಿದೆ ನಾಳೆ ಎಂಬುದೆ ಸುಳ್ಳು ಇಂದು ಜೀವನ ಗೆಲ್ಲು ನಿನ್ನ ಉತ್ತಮ ನೀಡಿ ಎಲ್ಲದರಲು ಅದನೆ ನಂಬಿದ ನನ್ನ ನಿನ್ನೆಯ ನೆನಪು – ಕನಸುಗಳು ಇಂದು ನಿಜವಾಗಿ […]

Read More

ಪ್ರಶ್ನೆ

ಮನದೊಳಗೊಂದು ಪ್ರಶ್ನೆ ನಾನು ಅಪ್ಪನ ಮಗನೋ? ಅಲ್ಲ ಅಮ್ಮನ ಮಗನೋ? ಅಪ್ಪನ ಕೇಳಿದೆ ಅಮ್ಮನ ಕೇಳಿದೆ ಆವಕ್ಕಾದರು. ಗೆಳೆಯರ ಕೇಳಿದೆ ಗುರುಗಳ ಕೇಳಿದೆ ತಬ್ಬಿಬ್ಬಾದರು. ನಾನೀಗ ನಮ್ಮ ಮನೆಯ ಚಿಕ್ಕ ಯಜಮಾನ ಅಪ್ಪನ ಮಗನೂ ಅಲ್ಲ ಅಮ್ಮನ ಮಗನೂ ಅಲ್ಲ! Please follow and like us:

Read More

ನಿಜದ ನೆರಳು ಆರುವ ಮುನ್ನ

ಕಂಬನಿಯಲ್ಲಿ ನಿಜದ ನೆರಳು ಬತ್ತಿ ಹೋಗುವ ಮುನ್ನ ಉರಿಸಿಬಿಡು ಮಿಥ್ಯವನು ಹೊಗೆಯಾಗಲಿ… ಇರದಿರಲಿ ಮಿಥ್ಯದ ಜಾಡು ಭಯದಲ್ಲಿ ನಿಜದ ನೆರಳು ಕರಗಿ ಹೋಗುವ ಮುನ್ನ ತೊದಲಿಬಿಡು ಸತ್ಯವನು ಸುಳ್ಳಿನ ಸುಳುಹುಗಳ ತೊಳೆದು-ಕಳೆದು. ಪ್ರಕೃತಿಯಲ್ಲಿ ನಿಜದ ನೆರಳು ಮಾಯವಾಗುವ ಮುನ್ನ ಊರಿಬಿಡು ನಿಜದ ಬೇರುಗಳ ಬಿತ್ತಿ ಸತ್ಯ ಬೀಜಗಳ ಸುಳ್ಳಿನ ಕಳೆಗಳ ಕಿತ್ತೆಸೆದು. ತನ್ನಿರವೆಂಬುದು ಇಲ್ಲದೆಯೂ ನಿತ್ಯ ನಿರಂತರ ಬೆಳೆವ ಮಿಥ್ಯ ಉರಿದೇ ತೀರುವುದು ನಿಜದ ಧಗ ಧಗ ಲಯ ಬದ್ಧ […]

Read More

ಕೆಂಪು ಹೂ

ಯಾರು ಬಣ್ಣ ತುಂಬಿದರು ಆ ಕೆಂಪು ಹೂವಿಗೆ?! ಕಂಪು ಸೂಸಿ, ಕೆಂಪಗೆ ನಕ್ಕು ದಿನ ಮುಗಿಯುವ ಮುನ್ನವೇ ಮಣ್ಣಾಗುತ್ತದೆ ಹಳದಿ ಹೂವಿನ ಬಣ್ಣ ಕೆಂಪಲ್ಲ ಆದರೂ ಹೊಳೆಯುತ್ತೆ ಆದರೆ ಬಣ್ಣ ತುಂಬಿದವರಾರು? ನೀಲಿ, ಬಿಳಿ, ಗುಲಾಬಿ ನಳನಳಿಸುವ ಪರಿ – ಕಣ್ ಮನಗಳಿಗಾನಂದ – ಸುಂದರ ಆದರೂ ಸಂಶಯ ಯಾರು ಬಣ್ಣ ತುಂಬಿದರೋ?! ಜಗ ಕತ್ತಲಿನಿಂದ ಬೆಳಕಿನೆಡೆ ಸರಿದಾಗ – ತಾನು ವಿಕಸನಗೊಂಡು ತನ್ನದೇ ಛಾಪು ಮೂಡಿಸಿ ಹೊರಟೆ ಹೋಗುತ್ತದೆ […]

Read More

ಆಸ್ತಿ

ಮುಖದ ಪೇಲವತೆ ಗುಳಿಬಿದ್ದ ಕೆನ್ನೆ – ಮೊನ್ನೆ ನೋಡಿದೆ ನನ್ನ ಮುಖ ಕನ್ನಡಿಯಲ್ಲಿ – ನನ್ನ ಆಸ್ತಿಗಳವು ನನಗೆ ನಾನೇ ಅಸಹ್ಯವೆನಿಸಿ ಊಟವೂ ಸಹ್ಯವಾಗದೆ ಮನ ಮಂಕಾಗಿ ಬುದ್ಧಿ ಮಂದವಾಗುತಿದೆ. ನನ್ನದೇ ಬಿಂಬ ಕನ್ನಡಿಯಲ್ಲಿ ಬಿಂಬಕ್ಕೆ ನಾನೇಆಧಾರಸ್ತಂಭ ಹುಚ್ಚು ಮನಸಿಗೆ ಕಿಚ್ಚು ಹಚ್ಚಿ ಕುಳಿತಲ್ಲೇ ಕುಳಿತೆ ಹಲವರು ಬಂದರು ತಿಂದುಂಡು ಹೊರಟುಹೋದರು ಯಾರ ಕರುಣೆಯು ಬೇಕಿರಲಿಲ್ಲ ನನಗೆ ನನ್ನತನವನ್ನೇ ಕಳಕೊಂಡು ಖಾಸಗಿ ಬದುಕಿಲ್ಲದೆ ಯಾರೋ ಆಡಿಸಿದಂತೆ ಕುಣಿದು ದಣಿದಿದ್ದೇನೆ ಮನ […]

Read More

ಭೂಮಿ ಗೀತೆ

ತಿಳಿ ನೀರು ಕಲ್ಮಶವಾಗಿದೆ ಮಣ್ಣಿನಲ್ಲಿ ಮಳೆ ನೀರ ಹಾಗೆ ಮೌನರಾಗದಲಿ ಹಾಡಿದೆನು ನಾ ಭೂಮಿ ಗೀತೆ ಬೆಳಕು ಜಾರಿದ ಮೇಲೆ ಕಾಣದಿಹ ದಾರಿಯಲಿ ಅರಳುತಿದೆ ಮನವೂ ಮಳೆಯ ರೀತಿ ನನ್ನ ಹಾಡುಗಳೆಲ್ಲ ಅರಳುವವು ಮುದುಡುವವು ನಿಲ್ಲದೇ ಹರಿಯುವವು ಮಳೆಯ ರೀತಿ ಕಲ್ಮಷಗೊಂಡಿಹ ನೀರನು ನಾ ನೋಡೆ ಕೆಂಪಗೆ ಹೊಳೆದೂ ಭೂಮಿಯ ತೊಳೆದು ಸರಿದಿದೆ ಮಳೆಯ ರೀತಿ ಭೂಮಿ ನೀರ ಸೆಳೆದ ಹಾಗೆ ಬಾನು ನೀರ ಹಿಡಿದ ಹಾಗೆ ನನ್ನ ಮನವೂ […]

Read More

ಪ್ರೀತಿ

ನಿನ್ನ ನೋಟದ ಮುನಿಸು ಹಿತವಾಗಿ ಕಾಡುವುದು ನನ್ನ ಹೃದಯದ ಒಲವ ತಬ್ಬಿ ಹಿಡಿದು….. ನಿನ್ನ ಮುನಿಸಿನ ಆಳ ನಾನರಿತು ಸುಖವೇನು? ಮಾತು ಹೊರಡಿಸು ನಲ್ಲೆ ಮೌನ ಮುರಿದು….. ಮೌನ ನಾಚಿತು ತಾನು ತಬ್ಬಿತು ಮನದ ಭಾವನೆ ಹೊರಳಿತೆದ್ದಿತು ಮನವು ಕೆದಕಿತು ಹಳೆಯ ನೆನಪನು ನಿನ್ನ ಕರೆದು…. ಪ್ರೀತಿ ಹುಟ್ಟಿತು ಹೃದಯ ತೆರೆಯಿತು ನಿನ್ನ ಒಲವಿನ ಹಾಯಿ ದೋಣಿಗೆ ಮನಸು ಕುಣಿಯಿತು ನಿನ್ನ ಒಲವನು ತಬ್ಬಿ ಹಿಡಿದು…… Please follow and […]

Read More

ನನ್ನವಳ ನಗು

ನನ್ನವಳು ನಗುವಾಗ ಕನಸುಗಳ ಸುಳಿಯೇಕೆ ಮುಂಗುರುಳ ಹಾರಾಟ ಭಾವುಕತೆಯೇಕೆ? ನನ್ನವಳ ಸುಳಿ ನಗೆಯ ಇಂಪಾದ ದನಿ ನನ್ನ ಕಿವಿಯೊಳಗೆ ಪ್ರತಿ ಚಣವು ದನಿಸುತಿಹುದು. ಕಾದಿಹೆನು ಅವಳನ್ನು ನನ್ನೆಡೆಗೆ ಬರಲೆಂದು ಸ್ನೇಹ ಪ್ರೇಮದ ನೆವವ ದೂರ ಸರಿಸಿ. ದನಿಸುತಿಹ ಆ ನಗುವು ನೆನಪಿರುವ ಆ ಮೊಗವು ಕಾಯುತಿಹೆ ನಾನಿಲ್ಲಿ ಸಿಹಲಗಳ ಒಲವು. ನನ್ನೆಡೆಗೆ ಬರುವಾಗ ಮೊಗದಲ್ಲಿ ನಗುವಿರಲಿ ಮುಂಗುರುಳ ಹಾರುತಿರಲಿ ನಮ್ಮ ಬಂಧಕೆ ಇರದಿರಲಿ ಕೊನೆ. Please follow and like […]

Read More

Enjoy this blog? Please spread the word :)