Close

Navya Kavya

ಅಗಲಿಕೆ

ನನ್ನ ಮಾತಲ್ಲಿ ಏನೆಲ್ಲಾ ಆವೇಗ, ಆಕ್ರೋಶ ಮನದಲ್ಲಿ ಹಿಡಿದಿಡಲಾಗದೆ ಕಕ್ಕಿದ ಭಾವ ಅಂತರಂಗದ ಬಯಕೆ ಆತನ ಆಗಮನದಿಂದ ಬೀದಿಗೆ ಬಿದ್ದಂತೆ ನಿಸ್ತೇಜ ಆತನೀಗ ಬರಿಯ ಪ್ರಿಯ ಗೆಳೆಯ ಆಕೆಯೂ ಗೆಳೆತಿ – ನಮ್ಮ ಗೆಳೆತನದ ನಿಜತನ ಅವಳೇನು ಬಲ್ಲಳು ಪಾಪ ನನ್ನಂತೆ ಅವನ ಮಾತಿನ ಮೋಡಿಗೆ ಬಲಿಯಾದವಳು ನಮ್ಮದೆಂದು ಕೊಂಡದ್ದು ನಮ್ಮದಲ್ಲವೆಂದು ಆತನ ನಿರ್ಗಮನದಲ್ಲಿಯೇ – ಅರಿವಾದದ್ದು ಈಗ ಕಾಯುವ ಕಾಯಕವಿಲ್ಲ – ನೆನಪೆಂಬ ವಿಷ ನುಂಗಲೂ ಆಗದೆ – […]

Read More

ನೆನಪಿನ ಪುಟಗಳು

ನನ್ನ ನೆನಪಿನ ಪುಟಗಳು ಖಾಲಿ – ಅಮವಾಸ್ಯೆಯ ಚಂದಿರನಂತೆ ನಾನೇ ಆಗಾಗ ನೆನಪುಗಳನು ಹೊರಹಾಕುತ್ತೇನೆ ಖಾಲಿ ಪುಟಗಳನ್ನು ತಿರುವಲು ಅದೇನೋ ಸಂತಸ ತುಂಬಿದ ಪುಟಗಳಾದರೆ ಅಲ್ಲಿ ನೋವಿರುತ್ತದೆ ಕೆದರಿದ ಕೂದಲಿನಂತೆ ಚದುರಿದ ಪುಟಗಳು ಉಲ್ಲಾಸದ ತಂಗಾಳಿಗೆ ಹೊಳೆದು ಕಳೆದು ಹೋಗುತ್ತವೆ ತೆರೆದ ಪುಟ ಮುಟ್ಟುವ ಮುನ್ನ ನೆನಪುಗಳು ತುಂಬುತ್ತವೆ ಎಲ್ಲಿಂದಲೋ ಬಂದು ಮತ್ತೆ ಹೊರಹಾಕುವುದೆಂದು? Please follow and like us:

Read More

ಬಂಧಿ

ಜೇಡನ ಬಲೆಯೊಳಗೆ ಸಿಲುಕಿದ ಆ ಕಪ್ಪು ನೊಣ ಕರೆಯಿತು ನನ್ನನ್ನು ಬಳಿಗೆ ಜೇಡ ನೋಡಿತು ನನ್ನ ಕೈ ಮುಗಿದು ಬೇಡಿತು ನನ್ನ ಆಹಾರ ತಪ್ಪಿಸದಿರು… ಪಂಜರದೊಳಗಿನ ಗಿಣಿ ಕೂಗಿ ಕೇಳಿತು ನನ್ನ ಸ್ವಾತಂತ್ರ್ಯ ನೀಡು ನೀ ಮಾಡೆನ್ನ ಬಂಧ ಮುಕ್ತ ಮನೆಯಜಮಾನ ಹೇಳಿದ ನನ್ನ ಪಂಜರ… ನನ್ನ ಗಿಣಿ… ತಾಯಿ ಬಂದಳು ಅಲ್ಲಿ ಹುಡುಕಿದಳು ಅಲ್ಲಲ್ಲಿ ಕಂಡಿರಲು ನನ್ನ ಕುರುಹು ಬಾ ಮನೆಗೆ ಹೋಗದಿರು ನೀ ಹೀಗೆ ಹೊರಗೆ ಅಪ್ಪಿದಳು […]

Read More

ಪ್ರೀತಿ

ನಿನ್ನ ನೋಟದ ಮುನಿಸು ಹಿತವಾಗಿ ಕಾಡುವುದು ನನ್ನ ಹೃದಯದ ಒಲವ ತಬ್ಬಿ ಹಿಡಿದು….. ನಿನ್ನ ಮುನಿಸಿನ ಆಳ ನಾನರಿತು ಸುಖವೇನು? ಮಾತು ಹೊರಡಿಸು ನಲ್ಲೆ ಮೌನ ಮುರಿದು….. ಮೌನ ನಾಚಿತು ತಾನು ತಬ್ಬಿತು ಮನದ ಭಾವನೆ ಹೊರಳಿತೆದ್ದಿತು ಮನವು ಕೆದಕಿತು ಹಳೆಯ ನೆನಪನು ನಿನ್ನ ಕರೆದು…. ಪ್ರೀತಿ ಹುಟ್ಟಿತು ಹೃದಯ ತೆರೆಯಿತು ನಿನ್ನ ಒಲವಿನ ಹಾಯಿ ದೋಣಿಗೆ ಮನಸು ಕುಣಿಯಿತು ನಿನ್ನ ಒಲವನು ತಬ್ಬಿ ಹಿಡಿದು…… Please follow and […]

Read More

ಮೋಡಗಳ ಕೂಗು

ಬಾನಿನಂಗಳದಲಿ ತೇಲುವ ಆ ಮೋಡಗಳು… ಆ ಮೋಡಗಳೆಡೆಯಲ್ಲಿ ಮರೆಯಾದ ಚಂದ್ರ. ಚಂದ್ರನ ಕಷ್ಟ ನೋಡಿ ಕಣ್ಣೀರಿಟ್ಟವು ಮೋಡಗಳು ಭೂರಮೆ ತಂಪಾದಳು ಹಿರಿ ಹಿರಿ ಹಿಗ್ಗಿದಳು. ಹಾಲು ಬೆಳದಿಂಗಳನು ಸೂಸಿದನು ಚಂದಿರನು ಹಸಿರು ತನೆ ತೆನೆದವು ಸೂರ್ಯ ಎಚ್ಚರಗೊಂಡನು! Please follow and like us:

Read More

ಕನಸು

ಕನಸುಗಳೇ ಬೇಡವೆಂದು ಕಂಬಳಿ ಹೊದ್ದರೂ ಗಲ್ಲ ಸವರುವ ಕನಸುಗಳು ಬೆನ್ನ ಹುರಿಯಲಿ ಹರಿದು ಮನದೊಳು ಸಂಚರಿಸುವವು || ಮೈಬೆವರ ಇಂಗಿಸಿ ತನುಮನ ಇಂಗಿಸುವ ಬಿಸಿಗಾಳಿ ಕೃತಕ ತಿರುಗಿ ತಿರುಗಿ ನಲಿದು ಬಿಸಿರೋಮಗಳ ಹಾಯ್ದು || ಹತ್ತಾರು ಕಾಲದ ನಡಿಗೆ ಕತ್ತಲ ಸೂರಿನಡಿ ಅಡಗಿದ ಹೆಜ್ಜೆ ಕನಸು ಹೆಮ್ಮರವಾಗಿ ಮನಸು ಮೌನಿನಿಯಾಗಿ ಕೈಗಳು ಕಂಬಳಿ ಎಳೆಯುವವು || Please follow and like us:

Read More

ಆತ್ಮ ತೃಪ್ತಿ

ಮನಸಿನ ತಲ್ಲಣಗಳು ಒಂದೇ, ಎರಡೇ? ಎಲ್ಲದಕ್ಕೂ ಆಲೋಚನೆ ಸಂಶಯ, ಗೊಂದಲ ಬೆಳಗಿನಿಂದ ಸಂಜೆಯ ತನಕ ರಾತ್ರಿಯಿಂದ ಹಗಲಿನ ತನಕ ಎದ್ದೊಡನೆ – ಏನು ಮಾಡಲಿ? ಎಂದಾದರೆ ರಾತ್ರಿ – ಎಲ್ಲಿ ಮಲಗಲಿ? ಮಧ್ಯಾಹ್ನ – ಏನು ತಿನ್ನಲಿ? ಸಂಜೆ – ಎಲ್ಲಿ ಹೋಗುವುದೆಂದೂ ಯಾವ ವಾಹನದಲ್ಲೆಂದೂ ಯಾರ ಜೊತೆಗೆಂದೂ ಚಪ್ಪಲಿ ಅಂಗಡಿಯಲ್ಲಿ ಯಾವ ಚಪ್ಪಲಿ? ಟೊಪ್ಪಿಗೆ ಮಹಲಿನಲ್ಲಿ ಯಾವ ತೆರನಾದ ಟೋಪಿ ಹಾಕಿಸಿಕೊಳ್ಳುವುದೆಂಬ ಗೊಂದಲ ಕುಡಿಯುವ ನೀರು ಶುದ್ಧವಾಗಿರದ ಭಯ […]

Read More

ಗುರುಗಳಿಗೆ

ನಿಮ್ಮ ಆಶಯ ನನ್ನ ಗುರಿ ನಿಮ್ಮ ಮಾತುಗಳು ನನ್ನ ದಾರಿ ಕಲಿಯಬೇಕಿದೆ ನಿಮ್ಮಿಂದ ಹಲವು ನಾನಿನ್ನೂ ಕೂಸುಮರಿ. ನಿಮ್ಮ ಗಾಂಭೀರ್ಯತೆ ಆ ಸರಳತೆ, ಸ್ನೇಹಭಾವ ನನ್ನ ಕಣ್ಣ ಮುಂದೆ ತೇಲಿ ಹನಿಗೂಡುತ್ತಿವೆ ಕಣ್ಣುಗಳು. ನೀವು ಕಲಿಸಿದ ವಿದ್ಯೆಯಿದೆ ಹೃದಯ ಶ್ರೀಮಂತಿಕೆಯಿದೆ ನಾನಿನ್ನೂ ನಿಮ್ಮ ಬಳಿ ಕಲಿಯುವುದಿದೆ ಬಹಳ. ಪಾದಗಳ ಕೆಳಗೆ ಸರಿಯುವ ದಾರಿಯ ಮೇಲೆ ಕಲ್ಲು-ಮುಳ್ಳುಗಳಿವೆ ತುಳಿದು ಪಾದ ಬೆಳೆಸಿದ್ದೇವೆ-ನೀವು ಕಾಣಸಿಗದ ಘೋರ ನೋವಿನಲ್ಲೂ. ಧನ್ಯವಾದಗಳು ಗುರುಗಳೇ ನಿಮಗೆ ಪ್ರಣಾಮಗಳು […]

Read More

ಗೆಳೆಯಾ ಹೋಗದಿರು

ಗೆಳೆಯಾ ಹೋಗದಿರು ದೂರ ನನ್ನೆದೆಯು ಆಗುವುದು ಭಾರ ಸಾವಿರ ಸಂಭ್ರಮದ ಬೀಜ ಬಿತ್ತಿ ಗಿಡವಾಗುವ ಮುನ್ನವೇ ನೀ ಹೊರಟುಹೋಗುವೆಯಾ? ಚಂಚಲ ಮನಸೇ ದೂರ ಸರಿ ನನ್ನಿಂದ ದೂರ ನಿಲ್ಲು ನನಗೇನೂ ಹೇಳಬೇಡ ಬೇಡ ಬರಬೇಡ ನನಗಾತ ಬೇಕೇ ಬೇಕು ಗೆಳೆಯಾ ಹೋಗುವೆಯಾ ದೂರ? ಗೆಳೆಯಾ ಹೋಗದಿರು ದೂರ ಕಷ್ಟಗಳ ಸಮುಚ್ಛಯಗಳೊಂದಿಗೆ ನನ್ನೊಡನೆ ಹಂಚಿಕೊ ಸಂತೋಷ ಹಂಚಿಕೊಂಡಂತೆ ಹೋಗದಿರು ನೀ ನಾ ನಿನ್ನ ದುಃಖಗಳಿಗೆ ಹೆಗಲು ಕೊಡುವೆ. ಗೆಳೆಯಾ ಹೋಗದಿರು ದೂರ […]

Read More

ನಿನ್ನೆ, ಇಂದು ಮತ್ತು ನಾಳೆ

ನಿನ್ನೆಯ ನೆನಪು – ಕನಸುಗಳು ಇಂದು ನಿಜವಾಗಿ ಹೊಸ ಭರವಸೆಯ ಬೆಳಕು ನಾಳೆಯ ಪರಿಪೂರ್ಣ ಅರಿವು ಇಲ್ಲ ನಾಳೆಯೇ ಇಲ್ಲವೇನೋ ಎಂಬ ಅಳುಕು ನಿನ್ನೆಯ ಸುಳ್ಳು ಇಂದು ನಿಜವಾದೊಡೆ ಇಂದಿನ ಕನಸು ನಾಳೆ ನನಸಾಗದೇ? ಇಲ್ಲ ನಾಳೆಯೇ ಇಲ್ಲ ಹೂವ ಹಾಸಿಗೆಯೂ ಮುಳ್ಳಾಗಿದೆ ನಾಳೆ ಎಂಬುದೆ ಸುಳ್ಳು ಇಂದು ಜೀವನ ಗೆಲ್ಲು ನಿನ್ನ ಉತ್ತಮ ನೀಡಿ ಎಲ್ಲದರಲು ಅದನೆ ನಂಬಿದ ನನ್ನ ನಿನ್ನೆಯ ನೆನಪು – ಕನಸುಗಳು ಇಂದು ನಿಜವಾಗಿ […]

Read More

Enjoy this blog? Please spread the word :)