Close

Monthly Archives: December 2017

ಆಕಾಶಮುಖಿ

ನನ್ನೊಲವು ನಲಿವಾಗಿ ಎಳೆ ಎಳೆಯಾಗಿ ಹರಡಿಕೊಂಡಂತೆ ನಾ ತೇಲಿ ಹೋಗುತ್ತೇನೆ! ಇರುಳಾಗುತ್ತದೆ ಮನ; ಕಡಲಾಗುತ್ತದೆ ಹಾಸಿಗೆ; ಈಜುತ್ತೇನೆ ನಾನು ದಡ ತಲುಪಲಾಗುವುದೇ ಇಲ್ಲ| ನಿಧಾನ ಮುಳುಗುತ್ತೇನೆ ಕನಸಿನಲೆಗಳ ಹೊಡೆತಕ್ಕೆ ಹರಿವಿನ ವೇಗಾಮೋದಕ್ಕೆ ಸಿಲುಕಿ; ಕೊಸರುತ್ತೇನೆ | ಅತ್ತಿತ್ತ ಹೊರಳುರುಳಿ ಮತ್ತೊಮ್ಮೆ ಇರುಳ ಕಡಲ ಬಿಡಲೊಳಗೆ ಬಂಧಿಯಾಗುತ್ತೇನೆ | ಮುಖ ಹುದುಗಿಸಲೂ ಮುಖಾಮುಖಿಯಾಗದ ಕಡಲಡಿಯ ಬಯಲಿಗೆ ನಿಧಾನ ಆಕಾಶಮುಖಿಯಾಗುತ್ತೇನೆ | Please follow and like us:

Read More

ಊರಿ ನಡೆಯಲಿಲ್ಲ ಹೆಜ್ಜೆ

ನಾ ನಡೆದಿದ್ದೇನೆ ಭ್ರಾಂತನಾಗಿ – ಊಳಿಡುವ ಮನದ ಜಾಡು ಹಿಡಿದು ನಡೆದಿದ್ದೇನೆ ಈ ರಾತ್ರಿ ಕತ್ತಲೆಯ ಸಿರಿ ನೀರವತೆಯಲಿ ನೆನಪ ಮಗ್ಗಲು ಮುಳ್ಳಿನ ಆವುಗೆ ಧರಿಸಿ | ನೀನೆಲ್ಲಿರುವೆ, ಎಲ್ಲಿರುವೆ ನೀನು? ತಿಳಿಯಲು ನಾ ನಡೆದಿದ್ದೇನೆ….. ಇಬ್ಬರೂ ಸಂಧಿಸಿದ ಆ ಬಿಂದುವಿನಿಂದ ಹೊರಟು ನಿಶ್ಚಲವಾಗಿ ಬಿದ್ದಿರುವ ರಸ್ತೆ ಮೈಮೇಲೆ ಅಗಣಿತ ಪಾದಗಳ ಗುರುತು || ನಾ ಹುಡುಕುವುದು ವ್ಯರ್ಥ, ಒಂದೂ ನಿನ್ನ ಪಾದದ ಆಕಾರಕ್ಕೆ ಹೋಲುತ್ತಿಲ್ಲ ಅನಂತ ಹೆಜ್ಜೆ ಗುರುತುಗಳು […]

Read More

ಹುಟ್ಟು ಗುಣ

ಕಾಲಕ್ಕೆ ಬರುತ್ತಿತ್ತು ಮಳೆ – ಈಗ ಕಾಲಕಾಲಕ್ಕೂ ಬರುತ್ತದೆ. ಎಲ್ಲ ಕಾಲದಲ್ಲೂ ತನ್ನ ಛಾಪು ಮೂಡಿಸಿ ಆವರಿಸಿ ನೆಲವನ್ನು ತೋಯಿಸುತ್ತದೆ || ಮಳೆಯ ಭೋರ್ಗರೆತ ಹೆಚ್ಚಾಗಿ ಅಲೆಗಳು ಮೇಲೇಳುತ್ತವೆ…..ಹಾರುತ್ತವೆ ರಭಸ ಸೆಳೆತಗಳಿಗೆ ಮುಳುಗುತ್ತದೆ ಬದುಕ ಹಾಯಿದೋಣಿ || ಬದುಕಿ ಉಳಿದವರು ಮತ್ತದೇ….. ಮಾಲಿನ್ಯ, ಕಾಗೆಯ ಕಪ್ಪು….. ತಿಳಿದಿದ್ದರೂ ಮುಳುಗುವುದೆಂದು ಬದುಕ ಹಾಯಿದೋಣಿ || Please follow and like us:

Read More

ಅಗಲಿಕೆ

ನನ್ನ ಮಾತಲ್ಲಿ ಏನೆಲ್ಲಾ ಆವೇಗ, ಆಕ್ರೋಶ ಮನದಲ್ಲಿ ಹಿಡಿದಿಡಲಾಗದೆ ಕಕ್ಕಿದ ಭಾವ ಅಂತರಂಗದ ಬಯಕೆ ಆತನ ಆಗಮನದಿಂದ ಬೀದಿಗೆ ಬಿದ್ದಂತೆ ನಿಸ್ತೇಜ ಆತನೀಗ ಬರಿಯ ಪ್ರಿಯ ಗೆಳೆಯ ಆಕೆಯೂ ಗೆಳೆತಿ – ನಮ್ಮ ಗೆಳೆತನದ ನಿಜತನ ಅವಳೇನು ಬಲ್ಲಳು ಪಾಪ ನನ್ನಂತೆ ಅವನ ಮಾತಿನ ಮೋಡಿಗೆ ಬಲಿಯಾದವಳು ನಮ್ಮದೆಂದು ಕೊಂಡದ್ದು ನಮ್ಮದಲ್ಲವೆಂದು ಆತನ ನಿರ್ಗಮನದಲ್ಲಿಯೇ – ಅರಿವಾದದ್ದು ಈಗ ಕಾಯುವ ಕಾಯಕವಿಲ್ಲ – ನೆನಪೆಂಬ ವಿಷ ನುಂಗಲೂ ಆಗದೆ – […]

Read More

ನೆನಪಿನ ಪುಟಗಳು

ನನ್ನ ನೆನಪಿನ ಪುಟಗಳು ಖಾಲಿ – ಅಮವಾಸ್ಯೆಯ ಚಂದಿರನಂತೆ ನಾನೇ ಆಗಾಗ ನೆನಪುಗಳನು ಹೊರಹಾಕುತ್ತೇನೆ ಖಾಲಿ ಪುಟಗಳನ್ನು ತಿರುವಲು ಅದೇನೋ ಸಂತಸ ತುಂಬಿದ ಪುಟಗಳಾದರೆ ಅಲ್ಲಿ ನೋವಿರುತ್ತದೆ ಕೆದರಿದ ಕೂದಲಿನಂತೆ ಚದುರಿದ ಪುಟಗಳು ಉಲ್ಲಾಸದ ತಂಗಾಳಿಗೆ ಹೊಳೆದು ಕಳೆದು ಹೋಗುತ್ತವೆ ತೆರೆದ ಪುಟ ಮುಟ್ಟುವ ಮುನ್ನ ನೆನಪುಗಳು ತುಂಬುತ್ತವೆ ಎಲ್ಲಿಂದಲೋ ಬಂದು ಮತ್ತೆ ಹೊರಹಾಕುವುದೆಂದು? Please follow and like us:

Read More

ಮಳೆಯ ಒಂದು ದಿನ

ಗಗನದಿ ಮೇಘಗಳೊಡುತಿವೆ ಹಕ್ಕಿಗಳು ಹಾರಾಡುತಿವೆ ದಿನಕರಣಂ ಕಾಯಕ ಮುಗಿಯುತಿರಲು ಹಿಮಕರನುದಯವಾಗುತಿದೆ ಭುವಿಯಲಿ ಕತ್ತಲೆ ತುಂಬುತ್ತಿದೆ ದೀಪದ ಬೆಳಕು ಏರುತಿದೆ ಭಾರಿ ಗಾಳಿ ಬೀಸಲು ತೊಡಗಿ ಬೆಳಕೆಲ್ಲ ಮಂಕಾಗುತಿದೆ ಮೋಡಗಳು ಚದುರಿ ಹೋಗುತಿದೆ ತಾರೆಗಳಲ್ಲಲ್ಲಿ ಮಿನುಗುತಿವೆ ಕೋಲ್ಮಿಂಚಿನ ಗರಿ ಕೆದರಿ ಗುಡುಗಿನ ಸದ್ದು ಕೇಳುತಿದೆ ಹನಿ ಹನಿ ಮಳೆಯು ಬೀಳುತಿದೆ ಮೋಡದ ಇರುವಿಕೆ ಸಾರುತಿದೆ ಚಂದ್ರ ತಾರೆಯು ಮಾಯವಾಗಲು ಮಳೆಯು ಆರ್ಭಟ ತೋರುತಿದೆ ಭುವಿಯಲಿ ನೀರು ಹರಿಯುತಿದೆ ಕೆಸರು ಕೊಚ್ಚಿ ಹೋಗುತಿದೆ […]

Read More

ಕೂಸು

ಹೆತ್ತಬ್ಬೆಗೆ ಬೇಡವಾದ ಜೀವ ಅಪ್ಪಯ್ಯನಿಗೂ ಆಪ್ಯಾಯವಾಗದೆ ಬಡವಾಯಿತು ಕೂಸು ಅರಳುವ ಮುನ್ನವೇ ಕಿತ್ತು ಮೊಗ್ಗನ್ನು ಖಾಲಿ ಗಿಡ ನೋಡಿ ಸಂತಸ ಹೊಂದುವ ಮಂದಿಗೇನು ಗೊತ್ತು ಕೂಸಿನಮನದ ನೋವು? ನೋವಿನ ಹಾದಿಯಲಿ ನಲಿವಿನ ಸುಳಿವರಸುತ್ತಾ ಕಾಯುತ್ತಿದೆ ಪ್ರೀತಿಗೆ ಹಂಬಲಿಸುತ್ತಾ Please follow and like us:

Read More

ಬಂಧಿ

ಜೇಡನ ಬಲೆಯೊಳಗೆ ಸಿಲುಕಿದ ಆ ಕಪ್ಪು ನೊಣ ಕರೆಯಿತು ನನ್ನನ್ನು ಬಳಿಗೆ ಜೇಡ ನೋಡಿತು ನನ್ನ ಕೈ ಮುಗಿದು ಬೇಡಿತು ನನ್ನ ಆಹಾರ ತಪ್ಪಿಸದಿರು… ಪಂಜರದೊಳಗಿನ ಗಿಣಿ ಕೂಗಿ ಕೇಳಿತು ನನ್ನ ಸ್ವಾತಂತ್ರ್ಯ ನೀಡು ನೀ ಮಾಡೆನ್ನ ಬಂಧ ಮುಕ್ತ ಮನೆಯಜಮಾನ ಹೇಳಿದ ನನ್ನ ಪಂಜರ… ನನ್ನ ಗಿಣಿ… ತಾಯಿ ಬಂದಳು ಅಲ್ಲಿ ಹುಡುಕಿದಳು ಅಲ್ಲಲ್ಲಿ ಕಂಡಿರಲು ನನ್ನ ಕುರುಹು ಬಾ ಮನೆಗೆ ಹೋಗದಿರು ನೀ ಹೀಗೆ ಹೊರಗೆ ಅಪ್ಪಿದಳು […]

Read More

Enjoy this blog? Please spread the word :)