Close
ಸೌಮ್ಯಾ ಪಿ

ಲೇಖಕಿ ಸೌಮ್ಯಾ ಪಿ ಅವರು ಪ್ರಸ್ತುತ ಕಣ್ಣೂರು ವಿಶ್ವವಿದ್ಯಾನಿಲಯದ, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ‘ಜಾಗತೀಕರಣದ ಸಂದರ್ಭದಲ್ಲಿ ಕನ್ನಡ ಸಣ್ಣಕತೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿಗಾಗಿ ಅಧ್ಯಯನ ನಡೆಸುತ್ತಿದ್ದಾರೆ.

ಉದಯವಾಣಿ, ಹೊಸದಿಗಂತ, ಮಯೂರ, ಹೊರನಾಡ ಕನ್ನಡಿಗ, ಸಂಕ್ರಮಣ, ಸಂಕ್ರಾಂತಿ ಮುಂತಾದ ಪತ್ರಿಕೆಗಳಲ್ಲಿ ಇವರ ಸೃಜನಶೀಲ ಬರಹಗಳು ಮತ್ತು ವಿಮರ್ಶೆಗಳು ಪ್ರಕಟವಾಗಿವೆ. ಆಕಾಶವಾಣಿ ಮಂಗಳೂರು ಕೇಂದ್ರದಲ್ಲಿ ಇವರ ಕವನಗಳು ಹಾಗೂ ಪ್ರಬಂಧ ಪ್ರಸಾರವಾಗಿವೆ. ಕಾಸರಗೋಡಿನ ಸ್ಥಳೀಯ ವಾರ್ತಾವಾಹಿನಿ ಯಲ್ಲಿ ವಾರ್ತಾ ವಾಚಕಿಯಾಗಿಯೂ, ವರದಿಗಾರರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಕಾಸರಗೋಡಿನ `ಉತ್ತರದೇಶ’ ಪತ್ರಿಕೆಯಲ್ಲಿ ಇವರ ‘ಮನಸಿನ ಮಾತು’ ಅಂಕಣ ಬರಹ ಕೆಲವು ವರ್ಷಗಳ ಕಾಲ ಪ್ರಕಟವಾಗುತ್ತಿತ್ತು.

ವಿವಿಧ ವಿದ್ಯಾಸಂಸ್ಥೆಗಳಲ್ಲಿ ನಡೆದ ರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಇವರ ‘ವಾಮನನ ಬೆರಗು’ ಕವನ ಸಂಕಲನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಧನಸಹಾಯ ಯೋಜನೆಯಡಿ ಪ್ರಕಟಗೊಂಡಿದೆ. ‘ಸಂಚಯ’ ವಿಮರ್ಶಾ ಸ್ಪರ್ಧೆಯಲ್ಲಿ, ಸಂಕ್ರಮಣ ಕಾವ್ಯ ಸ್ಪರ್ಧೆಯಲ್ಲಿ ಸೌಮ್ಯಾ ಪಿ ಅವರಿಗೆ ಪ್ರಥಮ ಬಹುಮಾನ ಬಂದಿದೆ.

ವಿಳಾಸ ಸೌಮ್ಯಾ ಪಿ ಸಂಶೋಧನ ವಿದ್ಯಾರ್ಥಿನಿ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗ ಸರಕಾರಿ ಕಾಲೇಜು ಕಾಸರಗೋಡು ವಿದ್ಯಾನಗರ – 671123 ಸಂಚಾರವಾಣಿ – 8943801831