Close

November 26, 2017

ಮೋಡಗಳ ಕೂಗು

ಬಾನಿನಂಗಳದಲಿ ತೇಲುವ
ಆ ಮೋಡಗಳು...
ಆ ಮೋಡಗಳೆಡೆಯಲ್ಲಿ
ಮರೆಯಾದ ಚಂದ್ರ.

ಚಂದ್ರನ ಕಷ್ಟ ನೋಡಿ
ಕಣ್ಣೀರಿಟ್ಟವು ಮೋಡಗಳು
ಭೂರಮೆ ತಂಪಾದಳು
ಹಿರಿ ಹಿರಿ ಹಿಗ್ಗಿದಳು.

ಹಾಲು ಬೆಳದಿಂಗಳನು
ಸೂಸಿದನು ಚಂದಿರನು
ಹಸಿರು ತನೆ ತೆನೆದವು
ಸೂರ್ಯ ಎಚ್ಚರಗೊಂಡನು!
Please follow and like us:

Leave a Reply

Enjoy this blog? Please spread the word :)