Close

July 3, 2017

ಮಾತು

ಚಂದಿರನ ಅಂಗಳದಲ್ಲಿ
ನಾವಿಬ್ಬರು ಜೋಕಾಲಿಯಾಡುತ್ತಿರುವ
ಕನಸು-ಇಂದು ನಿನ್ನೆಯದಲ್ಲ…
ಒಂದೇ ಕಂಪನಿಯ ಎರಡು
ಛೇಂಬರಿನಲ್ಲಿರುವ ನಮಗೆ
ವಾರಕ್ಕೊಮ್ಮೆ ಮಾತನಾಡಲೂ
ಸಮಯವಿಲ್ಲ!
ನಿತ್ಯ ನಿರಂತರ ಉದ್ಯೋಗ
ನಿದ್ದೆ-ಆಹಾರ, ಅವಾಗ-ಇವಾಗ
ಒಂದು ಎಸ್ಸೆಮ್ಮೆಸ್ಸು
ಒಂದು ಮಿಸ್ ಕಾಲು
ಇಷ್ಟೇ ನಮ್ಮೊಳಗಿನ
ಸಂಭ್ರಮ.
ವರುಷಕ್ಕೊಂದೇ ದೀವಳಿಗೆ
ಊರಿಗೆ ಹೊರಟೆವು ಮೆರವಣಿಗೆ
ಬಸೇರಿ ಇಳಿದು, ರೈಲೀರಿ-ಬೋಗಿಯೊಳಗೆ
ಯೋಗಿಯಂತೆ ಕುಳಿತು.
ನನ್ನ ಕೈಲೊಂದು ಕಂಪ್ಯೂಟರ್
ನನ್ನ ಕೈಲೊಂದು…
ಎದುರೆದುರಿದ್ದರೂ
ಅಂತರ್ಜಾಲದಲ್ಲೇ ಚಾಟಿಂಗ್
ಅಭ್ಯಾಸ ಬಲ.
ಅಬ್ಬ ಹಳ್ಳಿಯಲಿ ನೆಟ್‍ವರ್ಕ್ ಇಲ್ಲ
ನೀ ಹೇಳಿದೆ ನೋ ನೆಟ್ವರ್ಕ್ !
ನಾನು ನಕ್ಕೆ ಫಾರ್ ಮೀ ಟೂ !!
Please follow and like us:

Enjoy this blog? Please spread the word :)