Close

December 6, 2017

ಮಳೆಯ ಒಂದು ದಿನ

ಗಗನದಿ ಮೇಘಗಳೊಡುತಿವೆ 
ಹಕ್ಕಿಗಳು ಹಾರಾಡುತಿವೆ
ದಿನಕರಣಂ ಕಾಯಕ ಮುಗಿಯುತಿರಲು
ಹಿಮಕರನುದಯವಾಗುತಿದೆ

ಭುವಿಯಲಿ ಕತ್ತಲೆ ತುಂಬುತ್ತಿದೆ 
ದೀಪದ ಬೆಳಕು ಏರುತಿದೆ
ಭಾರಿ ಗಾಳಿ ಬೀಸಲು ತೊಡಗಿ 
ಬೆಳಕೆಲ್ಲ ಮಂಕಾಗುತಿದೆ

ಮೋಡಗಳು ಚದುರಿ ಹೋಗುತಿದೆ
ತಾರೆಗಳಲ್ಲಲ್ಲಿ ಮಿನುಗುತಿವೆ 
ಕೋಲ್ಮಿಂಚಿನ ಗರಿ ಕೆದರಿ 
ಗುಡುಗಿನ ಸದ್ದು ಕೇಳುತಿದೆ

ಹನಿ ಹನಿ ಮಳೆಯು ಬೀಳುತಿದೆ
ಮೋಡದ ಇರುವಿಕೆ ಸಾರುತಿದೆ 
ಚಂದ್ರ ತಾರೆಯು ಮಾಯವಾಗಲು 
ಮಳೆಯು ಆರ್ಭಟ ತೋರುತಿದೆ

ಭುವಿಯಲಿ ನೀರು ಹರಿಯುತಿದೆ
ಕೆಸರು ಕೊಚ್ಚಿ ಹೋಗುತಿದೆ 
ಮಳೆಯ ಕೋಪ ಕಡಿಮೆಯಾಗಲು 
ನೆಲದಲಿ ತಂಪು ನೆಲೆಸುತಿದೆ
Please follow and like us:

Enjoy this blog? Please spread the word :)