Close

July 17, 2017

ಭೂಮಿ ಗೀತೆ

ತಿಳಿ ನೀರು ಕಲ್ಮಶವಾಗಿದೆ
ಮಣ್ಣಿನಲ್ಲಿ ಮಳೆ ನೀರ ಹಾಗೆ
ಮೌನರಾಗದಲಿ ಹಾಡಿದೆನು ನಾ
ಭೂಮಿ ಗೀತೆ

ಬೆಳಕು ಜಾರಿದ ಮೇಲೆ
ಕಾಣದಿಹ ದಾರಿಯಲಿ
ಅರಳುತಿದೆ ಮನವೂ
ಮಳೆಯ ರೀತಿ

ನನ್ನ ಹಾಡುಗಳೆಲ್ಲ ಅರಳುವವು
ಮುದುಡುವವು ನಿಲ್ಲದೇ
ಹರಿಯುವವು
ಮಳೆಯ ರೀತಿ

ಕಲ್ಮಷಗೊಂಡಿಹ ನೀರನು
ನಾ ನೋಡೆ ಕೆಂಪಗೆ ಹೊಳೆದೂ
ಭೂಮಿಯ ತೊಳೆದು
ಸರಿದಿದೆ ಮಳೆಯ ರೀತಿ

ಭೂಮಿ ನೀರ ಸೆಳೆದ ಹಾಗೆ
ಬಾನು ನೀರ ಹಿಡಿದ ಹಾಗೆ
ನನ್ನ ಮನವೂ ಸೆಳೆದಿದೆ ನಿನ್ನ
ಉಕ್ಕಿದ ಪ್ರೀತಿ

Please follow and like us:

Enjoy this blog? Please spread the word :)