Close

December 2, 2017

ಬಂಧಿ

ಜೇಡನ ಬಲೆಯೊಳಗೆ ಸಿಲುಕಿದ
ಆ ಕಪ್ಪು ನೊಣ
ಕರೆಯಿತು ನನ್ನನ್ನು ಬಳಿಗೆ
ಜೇಡ ನೋಡಿತು ನನ್ನ
ಕೈ ಮುಗಿದು ಬೇಡಿತು
ನನ್ನ ಆಹಾರ ತಪ್ಪಿಸದಿರು…

ಪಂಜರದೊಳಗಿನ ಗಿಣಿ
ಕೂಗಿ ಕೇಳಿತು ನನ್ನ
ಸ್ವಾತಂತ್ರ್ಯ ನೀಡು ನೀ
ಮಾಡೆನ್ನ ಬಂಧ ಮುಕ್ತ
ಮನೆಯಜಮಾನ ಹೇಳಿದ
ನನ್ನ ಪಂಜರ… ನನ್ನ ಗಿಣಿ…

ತಾಯಿ ಬಂದಳು ಅಲ್ಲಿ
ಹುಡುಕಿದಳು ಅಲ್ಲಲ್ಲಿ
ಕಂಡಿರಲು ನನ್ನ ಕುರುಹು
ಬಾ ಮನೆಗೆ ಹೋಗದಿರು
ನೀ ಹೀಗೆ ಹೊರಗೆ
ಅಪ್ಪಿದಳು ನನ್ನ ಮುದ್ದಿಸಲು
ನಾನವಳ ತೋಳುಗಳಲಿ ಬಂಧಿ.

Please follow and like us:

Leave a Reply

Enjoy this blog? Please spread the word :)