Close

December 7, 2017

ನೆನಪಿನ ಪುಟಗಳು

ನನ್ನ ನೆನಪಿನ ಪುಟಗಳು
ಖಾಲಿ - ಅಮವಾಸ್ಯೆಯ
ಚಂದಿರನಂತೆ ನಾನೇ ಆಗಾಗ
ನೆನಪುಗಳನು ಹೊರಹಾಕುತ್ತೇನೆ

ಖಾಲಿ ಪುಟಗಳನ್ನು ತಿರುವಲು
ಅದೇನೋ ಸಂತಸ
ತುಂಬಿದ ಪುಟಗಳಾದರೆ
ಅಲ್ಲಿ ನೋವಿರುತ್ತದೆ

ಕೆದರಿದ ಕೂದಲಿನಂತೆ
ಚದುರಿದ ಪುಟಗಳು
ಉಲ್ಲಾಸದ ತಂಗಾಳಿಗೆ
ಹೊಳೆದು ಕಳೆದು ಹೋಗುತ್ತವೆ

ತೆರೆದ ಪುಟ ಮುಟ್ಟುವ ಮುನ್ನ
ನೆನಪುಗಳು ತುಂಬುತ್ತವೆ
ಎಲ್ಲಿಂದಲೋ ಬಂದು ಮತ್ತೆ
ಹೊರಹಾಕುವುದೆಂದು?
Please follow and like us:

Leave a Reply

Enjoy this blog? Please spread the word :)