Close

August 4, 2017

ನಿನ್ನೆ, ಇಂದು ಮತ್ತು ನಾಳೆ

ನಿನ್ನೆಯ ನೆನಪು - ಕನಸುಗಳು
ಇಂದು ನಿಜವಾಗಿ ಹೊಸ
ಭರವಸೆಯ ಬೆಳಕು

ನಾಳೆಯ ಪರಿಪೂರ್ಣ ಅರಿವು
ಇಲ್ಲ ನಾಳೆಯೇ ಇಲ್ಲವೇನೋ
ಎಂಬ ಅಳುಕು

ನಿನ್ನೆಯ ಸುಳ್ಳು ಇಂದು ನಿಜವಾದೊಡೆ
ಇಂದಿನ ಕನಸು ನಾಳೆ ನನಸಾಗದೇ?
ಇಲ್ಲ ನಾಳೆಯೇ ಇಲ್ಲ
ಹೂವ ಹಾಸಿಗೆಯೂ ಮುಳ್ಳಾಗಿದೆ

ನಾಳೆ ಎಂಬುದೆ ಸುಳ್ಳು
ಇಂದು ಜೀವನ ಗೆಲ್ಲು
ನಿನ್ನ ಉತ್ತಮ ನೀಡಿ
ಎಲ್ಲದರಲು

ಅದನೆ ನಂಬಿದ ನನ್ನ
ನಿನ್ನೆಯ ನೆನಪು - ಕನಸುಗಳು
ಇಂದು ನಿಜವಾಗಿ ಹೊಸ
ಭರವಸೆಯ ಬೆಳಕು
Please follow and like us:

Enjoy this blog? Please spread the word :)