Close

July 4, 2017

ನಾಶ

ಬಿರುಗಾಳಿಗೆ ಎದುರಿರುವ
ದೀಪವುಂಟೇ
ಸಮುದ್ರದಲೆಗಳನ್ನು
ಎದುರಿಸುವ ಗೋಡೆಯುಂಟೇ?
ಆರಿ ಹೋಯಿತು ದೀಪ
ಗಾಳಿಯ ಕಿರು ನಗೆಗೆ
ಗೋಡೆ ಉರುಳಿತು ಧರೆಗೆ
ಅಲೆಗಳ ಚುಂಬನಕೆ
ತೇಲು ಹೋದಳು ಅವಳು
ಅಲೆಗಳನೇರಿ… ಆ…
ಉರುಳಿದ ಗೋಡೆಯ
ಅವಶೇಷಗಳ ಮೇಲೆ.
ಕೈಯಲ್ಲಿ ಆರಿದ ದೀಪ
ಮೊಗದಲ್ಲಿ ಕೋಪದ ತಾಪ
ಯಾರೂ ಇಲ್ಲದ ಮುದ್ದು ಪಾಪ
ಹೋದದ್ದಾದರೂ ಎಲ್ಲಿಗೆ?
ಅಲೆಗಳು ಸರಿಯುತ್ತಿವೆ
ಕಲ್ಲುಗಳು ನೆಲದಲಿ ಹಾಸಿವೆ
ಅಚ್ಚುಕಟ್ಟಾಗಿ-ಕಾದಿವೆ ಅವಳ
ಪಾದ ಸ್ಪರ್ಶಕೆಂದು.
ಗೊತ್ತಿಲ್ಲ ಮರಳಿ ಬರುವಳೋ…
ದೀಪ ಉರಿದರೆ ಸರಿ
ಎಷ್ಟು ಬಾರಿ ತಾನುರಿದೀತು
ಆರದೇ ನಂದಾ ದೀಪ?
Please follow and like us:

Enjoy this blog? Please spread the word :)