Close

July 13, 2017

ನನ್ನವಳ ನಗು

ನನ್ನವಳು ನಗುವಾಗ
ಕನಸುಗಳ ಸುಳಿಯೇಕೆ
ಮುಂಗುರುಳ ಹಾರಾಟ
ಭಾವುಕತೆಯೇಕೆ?

ನನ್ನವಳ ಸುಳಿ ನಗೆಯ
ಇಂಪಾದ ದನಿ ನನ್ನ
ಕಿವಿಯೊಳಗೆ ಪ್ರತಿ ಚಣವು
ದನಿಸುತಿಹುದು.

ಕಾದಿಹೆನು ಅವಳನ್ನು
ನನ್ನೆಡೆಗೆ ಬರಲೆಂದು
ಸ್ನೇಹ ಪ್ರೇಮದ ನೆವವ
ದೂರ ಸರಿಸಿ.

ದನಿಸುತಿಹ ಆ ನಗುವು
ನೆನಪಿರುವ ಆ ಮೊಗವು
ಕಾಯುತಿಹೆ ನಾನಿಲ್ಲಿ
ಸಿಹಲಗಳ ಒಲವು.

ನನ್ನೆಡೆಗೆ ಬರುವಾಗ
ಮೊಗದಲ್ಲಿ ನಗುವಿರಲಿ
ಮುಂಗುರುಳ ಹಾರುತಿರಲಿ
ನಮ್ಮ ಬಂಧಕೆ ಇರದಿರಲಿ ಕೊನೆ.

Please follow and like us:

Enjoy this blog? Please spread the word :)