Close

June 26, 2017

ನಡಿಗೆ

ಚಪ್ಪರದಂತಿದ್ದ ಮೇ ಪ್ಲವರ್ ಗಳು
ನಡೆದಾಗ ತಲೆಯ ಮೇಲೆ ಬಿಸಿಲು
ಬೀಳುವುದನ್ನು ತಪ್ಪಿಸಿದವೋ?!
ಬಿಸಿಲಿನ ಶಾಖ ತಟ್ಟದೇ ಇರಲಿಲ್ಲ
ನಡೆದ ದಾರಿಯ ನಾನು ಸರಿಯಾಗಿ
ನೋಡಲಿಲ್ಲ ಕೊನೆಗೆ ನನ್ನ ಪಾದದ
ಹೆಜ್ಜೆ ಗುರುತುಗಳು ಅಲ್ಲಿ ಬಿದ್ದಿದ್ದವೋ?!
ಚಪ್ಪಲಿಯಂತೂ ಸವೆದಿದೆ
ಸಾರ್ಥಕ್ಯವಿಲ್ಲದ ಯಾತ್ರೆಯಂತೆ
ನಡೆದೂ ನಡೆದೂ ಮುಂದೆ ಮುಂದೆ…….
ದಾರಿಯೇ ಮುಗಿದು ಹೋದವೋ?!
ಸಮಯವಂತೂ ಕಳೆದಿದೆ
ಮೇ ಫ್ಲವರುಗಳ ಸುಳಿವಿಲ್ಲ
ಸೂರ್ಯ ಇಳಿದು ಸಾಗರದ
ಒಡಲು ಸೇರುವ ಅವಸರದಲ್ಲಿದ್ದಾನೋ?!
ಬಾನಂತೂ ಕೆಂಪಾಗಿದೆ
ಸವೆದ ಚಪ್ಪಲಿ ಹೊಸತಾಗದು
ಕಳೆದ ಸಮಯವೂ ಬಾರದು
ಕೆಂಪಗಿನ ಬಾನು ಕಪ್ಪಗಾಯಿತೋ?!
ಚಂದಿರ ಬಂದಿರುವನು
ಮುಂದಿರದ ದಾರಿ;  ಹಿಂದೇಕೆ ಹೋಗಲಿ?
ನಾಳೇಯಾದರೂ ಬಿಸಿಲು ಬಿದ್ದೀತು
ಮೇ ಫ್ಲವರ್ಗಳೂ ಕಾಣಿಸಿಯಾವು
ಯಾವುದೋ ದಾರಿ; ಎಲ್ಲಿಗೋ ಪಯಣ!
Please follow and like us:

Enjoy this blog? Please spread the word :)