Close

July 5, 2017

ಧಾವಂತ

ಮುಂಜಾವಿನ ಮಂಜು
ಎಲೆಗಳನು ತೋಯಿಸಿ
ಬಿಸಿಲಿಗೆ ಬಸವಳಿದು
ಕರಗಿತು ಹಸಿದು.
ಸೂರ್ಯನ ಬರುವಿಕೆಯ
ಅಂದದ ನೋಟ
ಮನ ತಣಿಸಿತು
ಕತ್ತಲ ಬಿರಿದು.
ಚಂದ್ರ ಓಡಿದನೆಲ್ಲಿಗೆ
ಸೂರ್ಯ ಮೂಡಿದ ಬಾನಲಿ
ಅವನೂ ಮಾಡುತ್ತಿದ್ದಾನೆ
ಪ್ರಯಾಣ ನಿಧಾನ.
ನಿಧಾನಿಸಿ, ಧಾವಿಸಿ
ಕೊನೆಗೆ ಧಾವಂತದಲಿ
ಸೇರುವನು ಕಡಲ
ಬಿಡಲು.
ಚಂದಿರನು ಮರಳುವನು
ತಂಪು ಆಗಸಕೆ
ನೀಡುವನು ಬೆಳದಿಂಗಳು
ಈ ಜಗಕೆ.
Please follow and like us:

Enjoy this blog? Please spread the word :)