Close

August 6, 2017

ಗೆಳೆಯಾ ಹೋಗದಿರು

ಗೆಳೆಯಾ ಹೋಗದಿರು ದೂರ
ನನ್ನೆದೆಯು ಆಗುವುದು ಭಾರ
ಸಾವಿರ ಸಂಭ್ರಮದ ಬೀಜ ಬಿತ್ತಿ
ಗಿಡವಾಗುವ ಮುನ್ನವೇ ನೀ
ಹೊರಟುಹೋಗುವೆಯಾ?

ಚಂಚಲ ಮನಸೇ ದೂರ ಸರಿ
ನನ್ನಿಂದ ದೂರ ನಿಲ್ಲು ನನಗೇನೂ
ಹೇಳಬೇಡ ಬೇಡ ಬರಬೇಡ
ನನಗಾತ ಬೇಕೇ ಬೇಕು
ಗೆಳೆಯಾ ಹೋಗುವೆಯಾ ದೂರ?

ಗೆಳೆಯಾ ಹೋಗದಿರು ದೂರ
ಕಷ್ಟಗಳ ಸಮುಚ್ಛಯಗಳೊಂದಿಗೆ
ನನ್ನೊಡನೆ ಹಂಚಿಕೊ ಸಂತೋಷ
ಹಂಚಿಕೊಂಡಂತೆ ಹೋಗದಿರು ನೀ
ನಾ ನಿನ್ನ ದುಃಖಗಳಿಗೆ ಹೆಗಲು ಕೊಡುವೆ.

ಗೆಳೆಯಾ ಹೋಗದಿರು ದೂರ
ಇರು ಇಲ್ಲಿಯೇ ಸುಖವಾಗಿ
ನಾನೇ ನಿನ್ನ ತೊರೆದು ತೊಲಗುತ್ತೇನೆ
ಬೇಕಾದರೆ ಆ ಕಷ್ಟಗಳ ಹೊತ್ತುಕೊಂಡು
ಗೆಳೆಯಾ ಹೋಗುವೆಯಾ ದೂರ?

Please follow and like us:

Enjoy this blog? Please spread the word :)