Close

September 5, 2017

ಗುರುಗಳಿಗೆ

ನಿಮ್ಮ ಆಶಯ ನನ್ನ ಗುರಿ 
ನಿಮ್ಮ ಮಾತುಗಳು ನನ್ನ ದಾರಿ 
ಕಲಿಯಬೇಕಿದೆ ನಿಮ್ಮಿಂದ ಹಲವು 
ನಾನಿನ್ನೂ ಕೂಸುಮರಿ. 
 
ನಿಮ್ಮ ಗಾಂಭೀರ್ಯತೆ 
ಆ ಸರಳತೆ, ಸ್ನೇಹಭಾವ 
ನನ್ನ ಕಣ್ಣ ಮುಂದೆ ತೇಲಿ 
ಹನಿಗೂಡುತ್ತಿವೆ ಕಣ್ಣುಗಳು. 
 
ನೀವು ಕಲಿಸಿದ ವಿದ್ಯೆಯಿದೆ 
ಹೃದಯ ಶ್ರೀಮಂತಿಕೆಯಿದೆ 
ನಾನಿನ್ನೂ ನಿಮ್ಮ ಬಳಿ 
ಕಲಿಯುವುದಿದೆ ಬಹಳ. 
 
ಪಾದಗಳ ಕೆಳಗೆ ಸರಿಯುವ 
ದಾರಿಯ ಮೇಲೆ ಕಲ್ಲು-ಮುಳ್ಳುಗಳಿವೆ 
ತುಳಿದು ಪಾದ ಬೆಳೆಸಿದ್ದೇವೆ-ನೀವು 
ಕಾಣಸಿಗದ ಘೋರ ನೋವಿನಲ್ಲೂ. 
 
ಧನ್ಯವಾದಗಳು ಗುರುಗಳೇ 
ನಿಮಗೆ ಪ್ರಣಾಮಗಳು 
ಹರಿಸದ್ದಕೆ-ಅಂದು, ಜೀವನ ಪಾಠ ಕಲಿಸಿದ್ದಕ್ಕೆ.
Please follow and like us:

Enjoy this blog? Please spread the word :)