Close

ಕೊಡುಗೆಗಳನ್ನು ಸ್ವೀಕರಿಸುತ್ತೆವೆ

ನಮ್ಮ ತಂಡವು ಬಹಳಷ್ಟು ಶ್ರಮ ವಹಿಸಿ ಕನ್ನಡ ನುಡಿ ಮತ್ತು ಕನ್ನಡ ಕವನಗಳನ್ನು ಉಳಿಸಿ ಬೆಳೆಸುವ ಪುಟ್ಟ ಪ್ರಯತ್ನವನ್ನು ಮಾಡುತ್ತಿದೆ. ನವ್ಯ ಕಾವ್ಯ ಒಂದು ಹೊಸ ಪ್ರಯತ್ನ. ನವರಸಗಳಿಂದ ಕೂಡಿದ, ನವ ಕವಿ – ಕವಯಿತ್ರಿಯರ ಕವನಗಳು ಇಲ್ಲಿ ಪ್ರಕಟಗೊಳ್ಳಲಿವೆ. ಇದರ ಹಿಂದಿನ ಶ್ರಮ, ಬರಿಯ ಸಮಯವಲ್ಲ. ನಮ್ಮ ಜಾಲತಾಣದ ನಿರ್ವಹಣೆ, ವೆಬ್ ವಿಳಾಸದ ಖರೀದಿ ಮತ್ತು ನವೀಕರಣ, ಸಾಮಾಜಿಕ ಜಾಲತಾಣದ ಪುಟಗಳ ನಿರ್ವಹಣೆ ಮುಂತಾದ ಹಲವು ಕಾರ್ಯಗಳಿಗೆ ತಗಲುವ ವೆಚ್ಚ ಹೆಚ್ಚುತ್ತಲೇ ಹೋಗುತ್ತದೆ. ಓದುಗರ ಸಂಖ್ಯೆ ಹೆಚ್ಚಾದಂತೆ ವೆಬ್ಸೈಟ್ ಕೂಡ ಬಲಹೊಂದಬೇಕಾಗುತ್ತದೆ. ಅದರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಬೇಕಾಗುವ ಹೋಸ್ಟಿಂಗ್ (ಸ್ಥಳಾವಕಾಶ) ಮತ್ತು ಅದರ ನಿರ್ವಹಣೆ, ಅದರ ವೇಗವನ್ನು ಹೆಚ್ಚಿಸುವ ಹಾಗೂ ಸಂಪೂರ್ಣ ನಿರ್ವಹಣೆಗೆ ಕೂಡ ನಾವು ಬಹಳಷ್ಟು ವ್ಯಯಿಸಬೇಕಾಗುತ್ತದೆ. ಈ ಪ್ರಯಾಣದಲ್ಲಿ ನಿಮ್ಮ ತನು ಮನ ಧನ ಸಹಾಯವು ಕನ್ನಡದ ಉಳಿವಿಗೊಂದು ಪುಟ್ಟ ಕಾಣಿಕೆಯಾಗಬಲ್ಲದು.

ನಿಮ್ಮ ದೇಣಿಗೆ – ಕನ್ನಡದ ಏಳಿಗೆಗೆ. ನಮ್ಮ ವಿನೂತನ ಪ್ರಯತ್ನವಿದು. ನಮಗೆ ಹೆಚ್ಚಿನ ದೇಣಿಗೆಗಳು ದೊರೆತಲ್ಲಿ ಕನ್ನಡದ ಉಳಿವಿಗೆ ಅದನ್ನು ಬಳಸುವ ಹಂಬಲ ಹಾಗು ಸದುದ್ದೇಶವೂ ನಮಗಿದೆ. ನಿಮ್ಮ ಮನಸ್ಸು ನಮ್ಮ ಕವನಗಳಿಂದ ಮುದಗೊಂಡಲ್ಲಿ, ನೀವು ಕನ್ನಡದ ಉಳಿವಿಗೆ ಪರೋಕ್ಷವಾಗಿ ಸಹಕರಿಸುವ ಮನಸ್ಸಿದ್ದಲ್ಲಿ ನಮಗೆ ದೇಣಿಗೆ ನೀಡಿ. ಕನ್ನಡ ಭಾಷಾ ಸಾಹಿತ್ಯದ ಕೈಂಕರ್ಯ ಹೊತ್ತು ಸಾಗಿರುವ ನಾವು ಕನ್ನಡ ಸಾಹಿತ್ಯ ಸಭಾವೊಂದನ್ನು ಮುಂಬರುವ ದಿನಗಳಲ್ಲಿ ರಚಿಸಿ ಅದರ ಮೂಲಕ ಕನ್ನಡಾಭಿವೃಧಿಗೆ ಪಣತೊಟ್ಟು ನಿಲ್ಲುತ್ತಿದ್ದೇವೆ. ನಿಮ್ಮ ಪ್ರತಿಯೊಂದು ದೇಣಿಗೆಯೂ ಕನ್ನಡ ಕಾವ್ಯ ಪರಂಪರೆಯ ಉಳಿವಿಗೆ ಅಗತ್ಯ. ನಿಮ್ಮ ಇಂದಿನ ಮುನ್ನಡೆ ಕನ್ನಡದ ಮುನ್ನೆಡೆಯೇನೆಂಬುದರಲ್ಲಿ ಯಾವ ಸಂಶಯವೂ ಇಲ್ಲ.

ವಿಶೇಷ ಸೂಚನೆ: ನೀವಿತ್ತ ದೇಣಿಗೆಯ ಸದುಪಯೋಗದ ಬಗೆಗೆ ವಿಚಾರಿಸಿದಲ್ಲಿ ಪ್ರತೀ ಮೂರು ತಿಂಗಳಿಗೊಮ್ಮೆ ವಿವರಗಳನ್ನು ಮಿಂಚಂಚೆ ಮೂಲಕ ದೇಣಿಗೆ ನೀಡಿದವರಿಗೆ ತಿಳಿಸಲಾಗುವುದು.