Close

July 31, 2017

ಕೆಂಪು ಹೂ

ಯಾರು ಬಣ್ಣ ತುಂಬಿದರು
ಆ ಕೆಂಪು ಹೂವಿಗೆ?!

ಕಂಪು ಸೂಸಿ, ಕೆಂಪಗೆ ನಕ್ಕು
ದಿನ ಮುಗಿಯುವ ಮುನ್ನವೇ
ಮಣ್ಣಾಗುತ್ತದೆ

ಹಳದಿ ಹೂವಿನ ಬಣ್ಣ
ಕೆಂಪಲ್ಲ ಆದರೂ ಹೊಳೆಯುತ್ತೆ
ಆದರೆ ಬಣ್ಣ ತುಂಬಿದವರಾರು?

ನೀಲಿ, ಬಿಳಿ, ಗುಲಾಬಿ
ನಳನಳಿಸುವ ಪರಿ – ಕಣ್
ಮನಗಳಿಗಾನಂದ – ಸುಂದರ
ಆದರೂ ಸಂಶಯ
ಯಾರು ಬಣ್ಣ ತುಂಬಿದರೋ?!

ಜಗ ಕತ್ತಲಿನಿಂದ ಬೆಳಕಿನೆಡೆ
ಸರಿದಾಗ – ತಾನು ವಿಕಸನಗೊಂಡು
ತನ್ನದೇ ಛಾಪು ಮೂಡಿಸಿ
ಹೊರಟೆ ಹೋಗುತ್ತದೆ
ಹಿಂದೆ ಹಿಂದೆ ಹೋದರೂ
ತಿಳಿಯಲ್ಲಿಲ್ಲ ಇನ್ನೂ
ಯಾರು ಬಣ್ಣ ತುಂಬಿದರು
ಆ ಕೆಂಪು ಹೂವಿಗೆ?!

Please follow and like us:

Enjoy this blog? Please spread the word :)