Close

November 18, 2017

ಕನಸು

ಕನಸುಗಳೇ ಬೇಡವೆಂದು
ಕಂಬಳಿ ಹೊದ್ದರೂ
ಗಲ್ಲ ಸವರುವ ಕನಸುಗಳು
ಬೆನ್ನ ಹುರಿಯಲಿ ಹರಿದು
ಮನದೊಳು ಸಂಚರಿಸುವವು ||

ಮೈಬೆವರ ಇಂಗಿಸಿ
ತನುಮನ ಇಂಗಿಸುವ
ಬಿಸಿಗಾಳಿ ಕೃತಕ
ತಿರುಗಿ ತಿರುಗಿ ನಲಿದು
ಬಿಸಿರೋಮಗಳ ಹಾಯ್ದು ||

ಹತ್ತಾರು ಕಾಲದ ನಡಿಗೆ
ಕತ್ತಲ ಸೂರಿನಡಿ ಅಡಗಿದ ಹೆಜ್ಜೆ
ಕನಸು ಹೆಮ್ಮರವಾಗಿ
ಮನಸು ಮೌನಿನಿಯಾಗಿ
ಕೈಗಳು ಕಂಬಳಿ ಎಳೆಯುವವು ||

Please follow and like us:

Leave a Reply

Enjoy this blog? Please spread the word :)