Close

July 30, 2017

ಆಸ್ತಿ

ಮುಖದ ಪೇಲವತೆ
ಗುಳಿಬಿದ್ದ ಕೆನ್ನೆ – ಮೊನ್ನೆ
ನೋಡಿದೆ ನನ್ನ ಮುಖ
ಕನ್ನಡಿಯಲ್ಲಿ – ನನ್ನ ಆಸ್ತಿಗಳವು

ನನಗೆ ನಾನೇ ಅಸಹ್ಯವೆನಿಸಿ
ಊಟವೂ ಸಹ್ಯವಾಗದೆ
ಮನ ಮಂಕಾಗಿ ಬುದ್ಧಿ
ಮಂದವಾಗುತಿದೆ.

ನನ್ನದೇ ಬಿಂಬ ಕನ್ನಡಿಯಲ್ಲಿ
ಬಿಂಬಕ್ಕೆ ನಾನೇಆಧಾರಸ್ತಂಭ
ಹುಚ್ಚು ಮನಸಿಗೆ ಕಿಚ್ಚು ಹಚ್ಚಿ
ಕುಳಿತಲ್ಲೇ ಕುಳಿತೆ

ಹಲವರು ಬಂದರು ತಿಂದುಂಡು
ಹೊರಟುಹೋದರು
ಯಾರ ಕರುಣೆಯು ಬೇಕಿರಲಿಲ್ಲ
ನನಗೆ

ನನ್ನತನವನ್ನೇ ಕಳಕೊಂಡು
ಖಾಸಗಿ ಬದುಕಿಲ್ಲದೆ
ಯಾರೋ ಆಡಿಸಿದಂತೆ
ಕುಣಿದು ದಣಿದಿದ್ದೇನೆ

ಮನ ತಿಳಿಯಾಗಿದೆ, ಮೊದಲ
ಹುಮ್ಮಸ್ಸು ಮರುಕಳಿಸಿದೆ
ಆದರೂ ಅದೇ ಕನ್ನಡಿ, ಗುಳಿ
ಬಿದ್ದ ಕೆನ್ನ ಮತ್ತು
ಪೇಲವ ಮುಖವೇ ನನ್ನ ಆಸ್ತಿ.

Please follow and like us:

Enjoy this blog? Please spread the word :)