Close

November 16, 2017

ಆತ್ಮ ತೃಪ್ತಿ

ಮನಸಿನ ತಲ್ಲಣಗಳು
ಒಂದೇ, ಎರಡೇ?
ಎಲ್ಲದಕ್ಕೂ ಆಲೋಚನೆ
ಸಂಶಯ, ಗೊಂದಲ

ಬೆಳಗಿನಿಂದ ಸಂಜೆಯ ತನಕ
ರಾತ್ರಿಯಿಂದ ಹಗಲಿನ ತನಕ
ಎದ್ದೊಡನೆ – ಏನು ಮಾಡಲಿ?
ಎಂದಾದರೆ ರಾತ್ರಿ – ಎಲ್ಲಿ ಮಲಗಲಿ?

ಮಧ್ಯಾಹ್ನ – ಏನು ತಿನ್ನಲಿ?
ಸಂಜೆ – ಎಲ್ಲಿ ಹೋಗುವುದೆಂದೂ
ಯಾವ ವಾಹನದಲ್ಲೆಂದೂ
ಯಾರ ಜೊತೆಗೆಂದೂ

ಚಪ್ಪಲಿ ಅಂಗಡಿಯಲ್ಲಿ
ಯಾವ ಚಪ್ಪಲಿ?
ಟೊಪ್ಪಿಗೆ ಮಹಲಿನಲ್ಲಿ
ಯಾವ ತೆರನಾದ ಟೋಪಿ
ಹಾಕಿಸಿಕೊಳ್ಳುವುದೆಂಬ ಗೊಂದಲ

ಕುಡಿಯುವ ನೀರು
ಶುದ್ಧವಾಗಿರದ ಭಯ
ಉಸಿರಾಡುವ ಗಾಳಿ
ವಿಷವಾಗಿರುವ ಭಯ

ಕಾಯಿಗೆ ಹಣ್ಣಾಗುವ
ಆತ್ಮ ತೃಪ್ತಿ - ನಮಗೆ?
ಹಾಂ! ಇಲ್ಲಿಯೂ ಗೊಂದಲ
ನಮಗೆಂದು ಆತ್ಮ ತೃಪ್ತಿ?
Please follow and like us:

Enjoy this blog? Please spread the word :)