Close

December 21, 2017

ಆಕಾಶಮುಖಿ

ನನ್ನೊಲವು ನಲಿವಾಗಿ
ಎಳೆ ಎಳೆಯಾಗಿ
ಹರಡಿಕೊಂಡಂತೆ
ನಾ ತೇಲಿ ಹೋಗುತ್ತೇನೆ!

ಇರುಳಾಗುತ್ತದೆ ಮನ;
ಕಡಲಾಗುತ್ತದೆ ಹಾಸಿಗೆ;
ಈಜುತ್ತೇನೆ ನಾನು
ದಡ ತಲುಪಲಾಗುವುದೇ ಇಲ್ಲ|

ನಿಧಾನ ಮುಳುಗುತ್ತೇನೆ
ಕನಸಿನಲೆಗಳ ಹೊಡೆತಕ್ಕೆ
ಹರಿವಿನ ವೇಗಾಮೋದಕ್ಕೆ
ಸಿಲುಕಿ; ಕೊಸರುತ್ತೇನೆ |

ಅತ್ತಿತ್ತ ಹೊರಳುರುಳಿ
ಮತ್ತೊಮ್ಮೆ ಇರುಳ
ಕಡಲ ಬಿಡಲೊಳಗೆ
ಬಂಧಿಯಾಗುತ್ತೇನೆ |

ಮುಖ ಹುದುಗಿಸಲೂ
ಮುಖಾಮುಖಿಯಾಗದ
ಕಡಲಡಿಯ ಬಯಲಿಗೆ
ನಿಧಾನ ಆಕಾಶಮುಖಿಯಾಗುತ್ತೇನೆ |

Please follow and like us:

Leave a Reply

Enjoy this blog? Please spread the word :)