Close
Aneesh Bhat

ಅನಿನಾದ ಒಬ್ಬ ಸಾಮಾನ್ಯ, ಪೆನ್ನು ಹಿಡಿದಿರುವ ಯುವಕ. ಯವ್ವನದ ಬಿಸಿ ರಕ್ತ ಶಾಯಿಯಾಗಿ ಹರಿದು, ಆಕ್ರೋಶವಾಗುವುದನ್ನು ತಡೆಯುತ್ತಾ; ನವ ಜೀವಂತಿಕೆಯುಳ್ಳ, ಲಯಬಧ್ಧ ಭಾವೋದ್ವೇಗದ ಮತ್ತು ಸುತ್ತಲಿನ ಪ್ರಕೃತಗಳನ್ನು ತನ್ನದೇ ಶೈಲಿಯಲಿ ಕಾಗದಕ್ಕಿಳಿಸುವುದನ್ನ ಹವ್ಯಾಸವಾಗಿಸಿಕೊಂಡವನು. ಶಿಕ್ಷಕ ದಂಪತಿಗಳಾದ ಶ್ರೀಯುತ ಪಿ. ವೆಂಕಟ್ರಮಣ ಭಟ್ ಮತ್ತು ಶ್ರೀಮತಿ ಜಯಲಕ್ಷ್ಮಿಯವರ ಪುತ್ರನಾಗಿ ಜನಿಸಿದೆ. ನನ್ನ ಪೋಷಕರೀರ್ವರೂ ಒಂದೇ ಸಂಸ್ಥೆಯಲ್ಲಿ ದುಡಿಯುತ್ತಿದ್ದುದರಿಂದ ನನ್ನ ಪ್ರಾಥಮಿಕ ಶಿಕ್ಷಣವನ್ನು ಅವರ ಶಾಲೆಯಲ್ಲೇ ಆರಂಭಿಸಿದೆ. ತಾಯಿ ಭಾಷಾ ಧ್ಯಾಪಕಿಯಾದುದರಿಂದ, ಅವರ ಪ್ರಭಾವದಿಂದ ಕನ್ನಡವನ್ನು ನನ್ನದಾಗಿಸಿಕೊಂಡೆ. ತಂದೆ ನನ್ನ ಬೆನ್ನೆಲುಬಾಗಿ ಎಲ್ಲಾ ಕಾರ್ಯಗಳಲ್ಲಿಯೂ ಸಹಕರಿಸುತ್ತಿದ್ದರು. ನನ್ನ ಇಚ್ಛಾಶಕ್ತಿಗೆ ಪ್ರೇರಣೆಯಾಗಿದ್ದರು. ಭಾಷಣ, ಕವನ, ಲೇಖನ, ಚುಟುಕು ಮುಂತಾದವುಗಳನ್ನು ಬರೆಯುವ ಹವ್ಯಾಸ ದಿನದಿಂದ ದಿನಕ್ಕೆ ವೃದ್ಧಿಯಾಯಿತು. ಭಾಷಣ ಕಲೆ ಸ್ಥಿರವಾಗದಿದ್ದರೂ ಕವನ ರಚನೆಯ ಹವ್ಯಾಸದೊಂದಿಗೆ ಸಂಗೀತದಲ್ಲಿಯೂ ಅಭಿರುಚಿ ಮೂಡಿತು. ಸಂಗೀತ ಸಾಹಿತ್ಯಗಳು ಸಂಗಮವಾದವು. ಸದಾಕಾಲ ಲವಲವಿಕೆಯಿಂದಿರುವಂತೆ, ನನ್ನ ಅಭಿರುಚಿಗೆ ಪ್ರೋತ್ಸಾಹವೆಂಬ ನೀರನ್ನೆರೆದವರು ನನ್ನ ಪ್ರೀತಿಯ ಚಿಕ್ಕಮ್ಮ ಚಿಕ್ಕಪ್ಪ, ಅಜ್ಜಿ ಹಾಗೂ ಅಜ್ಜ.ದೂರ ದೃಷ್ಟಿಯುಳ್ಳ ವ್ಯಕ್ತಿಗಳು ಒಂದೆಡೆ ಸೇರಿದರೆ ಮರುಭೂಮಿಯು ನಂದನವನವಾಗುತ್ತದೆಯಂತೆ.ಹಾಗೆಯೇ ನಾನು ಯಾವತ್ತೂ ಪ್ರಚಾರ ಬಯಸುವುದಿಲ್ಲ. ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಮಾತೊಂದು ಇಲ್ಲಿ ಸ್ಮರಣೀಯ – “ಕೆಲಸ ಮಾಡುವುದು ನಿನ್ನ ಧರ್ಮ ಫಲಾಫಲಗಳನ್ನು ಅಪೇಕ್ಷಿಸಬೇಡ’. “ ……………………………………..ಫಲವನ್ನು ಕೊಡುವವನು ದೇವರು ಎಂದು ತಿಳಿದು ಕೆಲಸ ಮಾಡು” ಇದು ನಿತ್ಯ ಸತ್ಯ. “ಬದುಕಿನಲ್ಲಿ ಜೀವಿ ಎಷ್ಟೆಷ್ಟು ಹೆಚ್ಚಾಗಿ, ಸೂಕ್ಷ್ಮವಾಗಿ, ಬದುಕನ್ನು ಸವಿಯುತ್ತ ಆ ಶಕ್ತಿಗಳನ್ನು ಬೆಳೆಸಿಕೊಳ್ಳುತ್ತಾನೋ – ಅಷ್ಟೇ ಹೆಚ್ಚಾಗಿ ತನ್ನ ಅನುಭವಗಳಿಂದ ಪರಿಣಾಮಗೊಳ್ಳುತ್ತಾನೆ.” ಆದರೆ ಈ ಅನುಭವಗಳನ್ನು ಚಿವುಟುದರ ಬದಲು ಬಯಲಾಗಿ ನಾಲ್ಕಾರು ಜನರೊಡನೆ ಹಂಚಿಕೊಳ್ಳವುದುಉತ್ತಮ ಎಂಬುದು ನನ್ನ ನಂಬಿಕೆ.ಓ ಸೃಷ್ಠಿಕರ್ತನೇ ನೀ… … “ಬರೆಯದೇ ಬರೆಯಿಸಿದೆ, ಓದದೇ ಓದಿಸಿದೆ, ಹಾಡದೇ ಹಾಡಿಸಿದೆ ನಿನ್ನಂಗಳದಲ್ಲೇ ನನ್ನ ಬಿತ್ತಿ ಬತ್ತದ ಉತ್ಸಾಹ ಚೈತನ್ಯಗಳೆಡೆಯಲ್ಲಿ ಬದುಕಿನ ಸವಿಯಾದ ಕ್ಷಣಗಳನು ಪರಿಚಯಿಸಿದೆ.” ಅರಳುವ ಹೂವುಗಳ ಜೊತೆ ಅರಳಿರುವ ನನ್ನ ಮನದ ಕವಿತೆಗಳನ್ನು ಮುದ್ದಿಸಿ ಪ್ರೀತಿ ವಾತ್ಸಲ್ಯಗಳಿಂದ ಪೋಷಿಸಿ ಬದುಕಿನ ಬೆಳಕಿನೆಡೆಗೆ ಮುನ್ನಡೆಸೆಂದು ಭಗವಂತನನ್ನು ಪ್ರಾರ್ಥಿಸಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಪ್ರೋತ್ಸಾಹಿಸಿ ಎಂದು ವಿನಂತಿಸಿ ಕವಿತೆಗಳನ್ನು ತೆರೆದಿಡುತ್ತಿರುವ ನಿಮ್ಮವ                                                                                                                                                                                                                                      –  ಅನಿನಾದ(ಅನಿಶ್ ಪಿ.ವಿ.)