Close

December 9, 2017

ಅಗಲಿಕೆ

ನನ್ನ ಮಾತಲ್ಲಿ ಏನೆಲ್ಲಾ ಆವೇಗ, ಆಕ್ರೋಶ
ಮನದಲ್ಲಿ ಹಿಡಿದಿಡಲಾಗದೆ ಕಕ್ಕಿದ ಭಾವ
ಅಂತರಂಗದ ಬಯಕೆ ಆತನ ಆಗಮನದಿಂದ
ಬೀದಿಗೆ ಬಿದ್ದಂತೆ ನಿಸ್ತೇಜ

ಆತನೀಗ ಬರಿಯ ಪ್ರಿಯ ಗೆಳೆಯ
ಆಕೆಯೂ ಗೆಳೆತಿ – ನಮ್ಮ ಗೆಳೆತನದ
ನಿಜತನ ಅವಳೇನು ಬಲ್ಲಳು ಪಾಪ
ನನ್ನಂತೆ ಅವನ ಮಾತಿನ ಮೋಡಿಗೆ ಬಲಿಯಾದವಳು

ನಮ್ಮದೆಂದು ಕೊಂಡದ್ದು ನಮ್ಮದಲ್ಲವೆಂದು
ಆತನ ನಿರ್ಗಮನದಲ್ಲಿಯೇ – ಅರಿವಾದದ್ದು
ಈಗ ಕಾಯುವ ಕಾಯಕವಿಲ್ಲ – ನೆನಪೆಂಬ ವಿಷ
ನುಂಗಲೂ ಆಗದೆ – ಉಗುಳಲೂ ಆಗದ ತುತ್ತಾಗಿದೆ.

Please follow and like us:

Enjoy this blog? Please spread the word :)