Close



ನವ್ಯ ಕಾವ್ಯ ಕರ್ನಾಟಕದ ಮೊತ್ತ ಮೊದಲ, ಕನ್ನಡ ಕವಿತೆಗಳ ಪ್ರಕಟಣೆ ಮತ್ತು ಪ್ರಸಾರಕ್ಕಾಗಿಯೇ ನಿರ್ಮಿತವಾದ ಬಹುಮುಖಿ ಅಂತರ್ಜಾಲ ತಾಣ. ಇದು ಉದಯೋನ್ಮುಖ ಕನ್ನಡ ಕವಿ-ಕವಯಿತ್ರಿಗಳ ಪ್ರತಿಭಾ ಪ್ರದರ್ಶನಕ್ಕೆ ಮತ್ತು ಕಾವ್ಯಾಸಕ್ತರ ಮನೋರಂಜನೆಗೆ ತಕ್ಕುದಾದ ವೇದಿಕೆಯಾಗಿದ್ದು, ನವರಸಯುಕ್ತ ಕವನಗಳ ಭರಪೂರ ಆನಂದವನ್ನು ಪಡೆಯಬಹುದು. 


 


ಅಲ್ಲದೆ ನವ ಪೀಳಿಗೆಯಲ್ಲಿ ಕನ್ನಡ ಸಾಹಿತ್ಯದ ಕುರಿತಾಗಿ ಆಸಕ್ತಿಯನ್ನು ಚಿಗುರಿಸಿ, ಯುವಕ-ಯುವತಿಯರನ್ನು ಕನ್ನಡದಲ್ಲಿ ಸೃಜನಶೀಲ ಕವನಗಳನ್ನು ಬರೆಯಲು ಪ್ರೇರೇಪಿಸಿ, ತನ್ಮೂಲಕ ಕನ್ನಡ ನುಡಿ ಮತ್ತು ಕನ್ನಡ ಸಾಹಿತ್ಯದ ಉಳಿವು-ಬೆಳವಿಗೆ ಅಳಿಲ ಸೇವೆಯನ್ನು ಸಲ್ಲಿಸುವ ಉದ್ದೇಶವೂ ಇದರ ಹಿಂದಿದೆ.


ನವ ಪೀಳಿಗೆಯ ಉತ್ಸಾಹ ಸಾಹಿತ್ಯದ ಬಗೆಗೆ ಕ್ಷೀಣಿಸುತ್ತಲೇ ಇರುವ ಯುಗದಲ್ಲಿ ನವ್ಯ ಬರವಣಿಗೆಯ ಉತ್ಸಾಹ ಹೊತ್ತು ನಿಮ್ಮ ಮುಂದೆ ಬರುತ್ತಿದ್ದೇವೆ. ನವೀನ ಆಲಾಪಗಳು,ಮೃದು ಮನದ ಕದ ತೆರೆದು ಬಂದ ಪದ, ಗೀಚಿದ ಕವಿತೆಗಳು ಇಲ್ಲಿ ಕಾಣಿಸುವುದಾದರೂ ನಿಗೂಢ ಅರ್ಥಗಳುಳ್ಳ, ಕವಿಯ ಅರ್ತವೂ ಉಳ್ಳ ಕವನಗಳು ನಿಮ್ಮ ಮನಸ್ಸನ್ನು ಚಿಂತನೆಗೆ ಹಚ್ಚಲಿವೆ. ಪ್ರಸಿದ್ಧ ಉದಯೋನ್ಮುಖ ಕವಿ, ಕವಯಿತ್ರಿಯರ ಸಂಗಮ; ನವ ನವೀನ ಕವನಗಳ ಸಮಾಗಮ ಈ ನವ್ಯ ಕಾವ್ಯ. 

ನೀವೂ ಕನ್ನಡ ಕವನಗಳನ್ನು ಬೆರೆಯುವಿರಾ? ನಿಮ್ಮ ಕವನಗಳನ್ನು ಮುಚ್ಚಿಡಬೇಡಿ. ನವ್ಯ ಕಾವ್ಯ ನಿಮ್ಮ ಬರವಣಿಗೆಗೊಂದು ಪ್ರೋತ್ಸಾಹ, ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ನಿಮ್ಮ ಕವನಗಳನ್ನು ನಮ್ಮ ಮಿಂಚಂಚೆಗೆ ಕಳುಹಿಸಿ, ನಿಮ್ಮ ಕವನಗಳು ಆಯ್ಕೆಯಾದಲ್ಲಿ ಅವನ್ನು ನಮ್ಮ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು. ನೀವು ನಮ್ಮ ತಂಡದ ಸದಸ್ಯರಾಗಬೇಕೇ? ನಮ್ಮ ಮಿಂಚಂಚೆಗೆ ನಿಮ್ಮ ವಿವರ, ದೂರವಾಣಿ ಸಂಖ್ಯೆ, ನಿಮ್ಮ ೪ ಕವನಗಳನ್ನು ಕಳುಹಿಸಿಕೊಡಿ. ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.  


ನಿಮ್ಮ ದೇಣಿಗೆ – ಕನ್ನಡದ ಏಳಿಗೆಗೆ. ನಮ್ಮ ವಿನೂತನ ಪ್ರಯತ್ನವಿದು. ಕನ್ನಡ ಭಾಷಾ ಸಾಹಿತ್ಯದ ಕೈಂಕರ್ಯ ಹೊತ್ತು ಸಾಗಿರುವ ನಾವು ಕನ್ನಡ ಸಾಹಿತ್ಯ ಸಭಾವೊಂದನ್ನು ಮುಂಬರುವ ದಿನಗಳಲ್ಲಿ ರಚಿಸಿ ಅದರ ಮೂಲಕ ಕನ್ನಡಾಭಿವೃಧಿಗೆ ಪಣತೊಟ್ಟು ನಿಲ್ಲುತ್ತಿದ್ದೇವೆ. ನಿಮ್ಮ ಪ್ರತಿಯೊಂದು ದೇಣಿಗೆಯೂ ಕನ್ನಡ ಕಾವ್ಯ ಪರಂಪರೆಯ ಉಳಿವಿಗೆ ಅಗತ್ಯ. ನಿಮ್ಮ ಇಂದಿನ ಮುನ್ನಡೆ ಕನ್ನಡದ ಮುನ್ನೆಡೆಯೇನೆಂಬುದರಲ್ಲಿ ಯಾವ ಸಂಶಯವೂ ಇಲ್ಲ. 

ಹೊಸ ಕವಿತೆಗಳು

ನಮ್ಮ ಹೊಸ ಕವನಗಳು, ಪ್ರಕಟಣೆಗಳು ಮತ್ತು ನವೀಕರಣಗಳ ವಿವರಗಳು ನಿಮಗಿಲ್ಲಿ ಲಭ್ಯವಾಗುವುದು. ಅತ್ಯುತ್ತಮ, ಆಯ್ದ ಕವನಗಳನ್ನು ಮಾತ್ರ ನಮ್ಮ ಜಾಲತಾಣದಲ್ಲಿ  ಪ್ರಕಟಿಸುತ್ತಿದ್ದೇವೆ.